ಉಡುಪಿ, ಮಾ.5: ಕೇಂದ್ರ ಸರ್ಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ನೀಡುವ ರಾಜ್ಯದ ಅತ್ಯುತ್ತಮ ಯುವಕ ಮಂಡಳ ಪ್ರಶಸ್ತಿಗೆ ಹೆಬ್ರಿ ತಾಲೂಕಿನ ಕುಚ್ಚೂರು ಕುಡಿಬೈಲ್ ಶಾಂತಿನಿಕೇತನ ಯುವ ವೃಂದವು ಅಯ್ಕೆಯಾಗಿದ್ದು, ಇದರ ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 7 ರಂದು ಬೆಳಗ್ಗೆ 9.30 ಕ್ಕೆ ನಗರದ ಪಿ.ಪಿ.ಸಿ ಕಾಲೇಜಿನಲ್ಲಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.