ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 21 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಉಡುಪಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡಳ್ಳಿ ಇವರ ಸಹಯೋಗದಲ್ಲಿ ನಡೆದ 2025 -26ನೇ ಸಾಲಿನ, ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮದರ್ ತೆರೇಸಾ ಶಿಕ್ಷಣ ಸಂಸ್ಥೆ , ಶಂಕರನಾರಾಯಣ ಇಲ್ಲಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಪ್ರಥಮ ಸ್ಥಾನ ಪಡೆದ 21 ಮಂದಿ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ ಆಗಿರುತ್ತಾರೆ.

ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಕಿರಿಯ ಪ್ರಾಥಮಿಕ ವಿಭಾಗ ( 1ರಿಂದ 4ನೇ ತರಗತಿ)

  1. ಪ್ರಣತಿ ಜೆ ಶೆಟ್ಟಿ,- ೪ನೇ ತರಗತಿ (ಕಥೆ ಹೇಳುವುದು)
  2. ರಕ್ಷತ್ ಆರ್ ಸಿ- ೪ನೇ ತರಗತಿ (ಆಶುಭಾಷಣ) 3.ಮಹಮ್ಮದ್ ಇಲಾಪ್- ೩ ನೇ ತರಗತಿ (ಅರೇಬಿಕ್ ಧಾರ್ಮಿಕ ಪಠಣ)
    4.ಸನ್ವಿತ ಯು- ೪ ನೇ ತರಗತಿ (ಭಕ್ತಿಗೀತೆ)
    ಹಿರಿಯ ಪ್ರಾಥಮಿಕ ವಿಭಾಗ (5 ರಿಂದ 7ನೇ ತರಗತಿ)
    1.ಮಹಮ್ಮದ್ ಮೆಹರಾನ್ -6 ನೇ ತರಗತಿ (ಅರೇಬಿಕ್ ಧಾರ್ಮಿಕ ಪಠಣ)
    2.ಮಹಮದ್ ಮೆಹರಾನ್- 6 ನೇ ತರಗತಿ (ಹಿಂದಿ ಕಂಠಪಾಠ)
    3.ಶ್ರೀಕರ ಭಟ್ -6 ನೇ ತರಗತಿ (ಭಕ್ತಿಗೀತೆ)
    ಪ್ರೌಢಶಾಲಾ ವಿಭಾಗ
    1 . ವರ್ಷ ಅಲ್ಸೆ 9ನೇ ತರಗತಿ (ಸಂಸ್ಕೃತ ಧಾರ್ಮಿಕ ಪಠಣ)
    2.ಮಧುರಾ-9 ನೇ ತರಗತಿ (ಇಂಗ್ಲೀಷ್ ಭಾಷಣ)
    3 ಪ್ರೀತಮ್ 10 ನೇ ತರಗತಿ, ರಿಷಿ 1೦ ನೇ ತರಗತಿ (ರಸಪ್ರಶ್ನೆ ಸ್ಪರ್ಧೆ).
    4.ಅಪ್ಸಿಯ – ದ್ವಿತೀಯ ಪಿಯುಸಿ(ಅರೇಬಿಕ್ ಧಾರ್ಮಿಕ ಪಠಣ)
    5.ಆಫೀಝಾ ದ್ವಿತೀಯ ಪಿಯುಸಿ (ಗಜಲ್)
  3. ಪ್ರತೀಕ್ಷ ದ್ವಿತೀಯ ಪಿಯುಸಿ (ಆಶುಭಾಷಣ)
  4. ಸ್ವಾತಿ ಶೆಟ್ಟಿ- ದ್ವಿತೀಯ ಪಿಯುಸಿ (ಆಶುಭಾಷಣ)
  5. ಸಂಜನಾ – ದ್ವಿತೀಯ ಪಿಯುಸಿ (ಭರತನಾಟ್ಯ).
  6. ಕನ್ನಿಕಾ- ಪ್ರಥಮ ಪಿಯುಸಿ (ರಂಗೋಲಿ)
  7. ಧನುಷ್ – ಪ್ರಥಮ ಪಿಯುಸಿ (ಭಾವಗೀತೆ)
  8. ಶ್ರೀನಿಧಿ ಡಿ ಶೆಟ್ಟಿ -ಪ್ರಥಮ ಪಿಯುಸಿ (ಹಿಂದಿ ಭಾಷಣ)
  9. ರಕ್ಷಿತಾ – ಪ್ರಥಮ ಪಿಯುಸಿ (ಕನ್ನಡ ಭಾಷಣ)
  10. ಹರ್ಷಿಣಿ -ದ್ವಿತೀಯ ಪಿಯುಸಿ (ಜನಪದ ಗೀತೆ ). .
  11. ಪ್ರತೀಕ್ಷ – ದ್ವಿತೀಯ ಪಿಯುಸಿ (ಚರ್ಚಾ ಸ್ಪರ್ಧೆ)
    ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಸುಪ್ತ ಪ್ರತಿಭೆಗಳನ್ನು ವ್ಯಕ್ತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ವಿದ್ಯಾರ್ಥಿಗಳಿಗೆ ಮದರ್ ತೆರೆಸಾ ಶಿಕ್ಷಣಸಂಸ್ಥೆಯ ಆಡಳಿತ ಮಂಡಳಿಯವರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯಿನಿ, ಬೋಧಕ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.