ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಗೆ ಮೊದಲ ತಾಯ್ನಾಡ ಗೌರವ: ಸ್ಪಿನ್ ಮಾಂತ್ರಿಕನಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದ ಆಸ್ಟ್ರೇಲಿಯಾ

ರಾಣಿಯ ಜನ್ಮದಿನದ ಪಟ್ಟಿಯಲ್ಲಿ ಮಾಜಿ ಟೆನಿಸ್ ಆಟಗಾರ್ತಿ ಆಶ್ ಬಾರ್ಟಿ ಜೊತೆಗೆ ಆಫೀಸರ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಎಂದು ಹೆಸರಿಸಲ್ಪಟ್ಟ ನಂತರ ಶೇನ್ ವಾರ್ನ್ ತಮ್ಮ ಮೊದಲ ಆಸ್ಟ್ರೇಲಿಯಾದ ಗೌರವವನ್ನು ಮರಣೋತ್ತರವಾಗಿ ಪಡೆದರು.

ಮಾರ್ಚ್‌ನಲ್ಲಿ ಥೈಲ್ಯಾಂಡ್‌ನಲ್ಲಿ ರಜಾದಿನಗಳಲ್ಲಿದ್ದಾಗ ಶಂಕಿತ ಹೃದಯಾಘಾತದಿಂದ 52 ನೇ ವಯಸ್ಸಿನಲ್ಲಿ ನಿಧನರಾದ ಸ್ಪಿನ್-ಬೌಲಿಂಗ್ ಮಾಂತ್ರಿಕನಿಗೆ ಕ್ರೀಡಾ ಜಗತ್ತೇ ಪ್ರಶಸ್ತಿಗಳ ಸುರಿಮಳೆಗೈದಿದ್ದರೂ ಅವರ ಸ್ವಂತ ದೇಶವು ಅವರನ್ನು ಔಪಚಾರಿಕವಾಗಿ ಗೌರವಿಸಿರಲಿಲ್ಲ. ಅದನ್ನೀಗ ಸರಿಪಡಿಸಲಾಗಿದ್ದು, ಭಾನುವಾರ ತಡರಾತ್ರಿ “ಒಬ್ಬ ಆಟಗಾರನಾಗಿ ಕ್ರಿಕೆಟ್ ಗೆ ಸಲ್ಲಿಸಿದ ಸೇವೆಗಾಗಿ, ಆದರ್ಶ ವ್ಯಕ್ತಿತ್ವಕ್ಕಾಗಿ ಮತ್ತು ಕಾಮೆಂಟೇಟರ್‌ ಆಗಿ ಹಾಗೂ ದತ್ತಿ ಉಪಕ್ರಮಗಳ ಮೂಲಕ ಸಮುದಾಯಕ್ಕೆ ವಿಶಿಷ್ಟ ಸೇವೆಗಾಗಿ ಮತ್ತು ಲೋಕೋಪಕಾರಿ ಕೊಡುಗೆಗಳಿಗಾಗಿ” ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

“ಶೇನ್ ವಾರ್ನ್ ಜಗತ್ತು ಕಂಡ ಅತ್ಯಂತ ಪ್ರತಿಭಾವಂತ ಮತ್ತು ವರ್ಚಸ್ವಿ ಕ್ರಿಕೆಟಿಗರಲ್ಲಿ ಒಬ್ಬರು ಮತ್ತು ಅವರ ಮೈದಾನದ ಒಳಗಿನ ಮತ್ತು ಹೊರಗಿನ ಎರಡೂ ಅಳಿಸಲಾಗದ ಪರಂಪರೆಯನ್ನು ಇಂದು ನಾವು ನೆನಪಿಸಿಕೊಳ್ಳುತ್ತಿದ್ದೇವೆ, ”ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ.