ಫೆಬ್ರವರಿ 8 ರಂದು ಶಾಂಭವೀ ಹೋಟೆಲ್ & ಕನ್ವೆನ್ನನ್ ಸೆಂಟರ್ ಅದ್ಧೂರಿ ಶುಭಾರಂಭ : ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆಯ ಲೋಕಾರ್ಪಣೆ

ಉಡುಪಿ: ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ನನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಸಾಯಂಕಾಲ 4 ಗಂಟೆಗೆ ನೆರವೇರಲಿದೆ.

ಸಭಾರಂಭದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಗಮಿಸಿ ಶುಭಾಶೀರ್ವಚನ ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ,  ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ನಾಡೋಜ ಡಾ. ಜಿ.ಶಂಕರ್‌ ಅಧ್ಯಕ್ಷರು, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಗುರ್ಮೆ ಸುರೇಶ್ ಶೆಟ್ಟಿ ಶಾಸಕರು ಕಾಪು ವಿಧಾನಸಭಾ ಕ್ಷೇತ್ರ, ಯಶಪಾಲ ಸುವರ್ಣ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಕೆ. ಜಯಪ್ರಕಾಶ್ ಹೆಗ್ಡೆ ಮಾಜಿ ಸಚಿವರು, ಕರ್ನಾಟಕ ಸರಕಾರ, ವಿನಯಕುಮಾರ್ ಸೊರಕೆ ಮಾಜಿ ಸಚಿವರು, ಕರ್ನಾಟಕ ಸರಕಾರ, ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು, ಕರ್ನಾಟಕ ಸರಕಾರ,

ಫಾ.ರೋಮಿಯೋ ಲುವಿಸ್‌ ಕ್ರೈಸ್ಟ್ ಚರ್ಚ್ ಮಣಿಪಾಲ, ಮುನಿಯಾಲು ಉದಯಕುಮಾರ್ ಶೆಟ್ಟಿ ಕಾಂಗ್ರೆಸ್ ಮುಖಂಡರು, ಕಾರ್ಕಳ, ಪ್ರಸಾದ್ ಕಾಂಚನ್ ಕಾಂಗ್ರೆಸ್ ಮುಖಂಡರು, ಉಡುಪಿ, ಲಾಲಾಜಿ ಆರ್, ಮೆಂಡನ್ ಮಾಜಿ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ, ಆನಂದ್‌ ಸಿ.ಕುಂದ‌ರ್ ಪ್ರವರ್ತಕರು, ಗೀತಾನಂದ ಫೌಂಡೇಶನ್, ಕೋಟ, ಪುರುಷೋತ್ತಮ ಶೆಟ್ಟಿ ಉಜ್ವಲ್ ಡೆವಲಪರ್ & ಬಿಲ್ಡರ್ಸ್, ಉಡುಪಿ, ಹರೀಶ್ ಶೆಟ್ಟಿ ಬಾಳ್ಕಟ್ಟ ಅಧ್ಯಕ್ಷರು, ಆತ್ರಾಡಿ ಗ್ರಾಮ ಪಂಚಾಯತ್, ರಮೇಶ್ ಕಾಂಚನ್ ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಉಡುಪಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ವಿಶೇಷ ಕಾರ್ಯಕ್ರಮಗಳು:

ಮಧ್ಯಾಹ್ನ 3 ಗಂಟೆಯಿಂದ ಸಂಗೀತ ನಿರ್ದೇಶಕ, ಗಾಯಕ ವಿದ್ವಾನ್ ಯಶವಂತ ಎಂ.ಕೆ. ಇವರಿಂದ ಸಂಗೀತ ಕಾರ್ಯಕ್ರಮ ಗಾನಾಂಜಲಿ, ಸಂಜೆ 7.00 ಗಂಟೆಯಿಂದ ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯರೂಪಕ ನಾರಸಿಂಹ
(ಒಳಿತಿನ ವಿಜಯದ ಕಥನ) ನಿರ್ದೇಶನ : ಡಾ.ಪಾದ ಭಟ್ ನೃತ್ಯ ನಿರ್ದೇಶನ : ವಿದ್ವಾನ್‌ ಸುಧೀರ್‌ ರಾವ್ ಕೊಡವೂರು ವಿದುಷಿ ಮಾನಸಿ ಸುಧೀ‌ರ್ ವಿದುಷಿ ಅನಘಶ್ರೀ, ರಾತ್ರಿ 8.30 ರಿಂದ ಸಿಡಿಮದ್ದು ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಶ್ರೀಮತಿ ಸೆಲಿನ್ ಅಪ್ಪು ಮತ್ತು ಶ್ರೀ ಅಪ್ಪು ಮರಕಲ ಅಶ್ವಿನ್, ಅಕ್ಷಯ್, ಏಂಜೆಲಾ ಅವರು ತಿಳಿಸಿದ್ದಾರೆ.