ಉಡುಪಿಯ ಆತ್ರಾಡಿಯಲ್ಲಿ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಲೋಕಾರ್ಪಣೆ.

ಉಡುಪಿ: ಕರಾವಳಿಯ ಜನಪ್ರಿಯ ಸಂಸ್ಥೆಯಾದ ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಅದ್ದೂರಿಯಿಂದ ನಡೆಯಿತು.

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಇಚ್ಚಾಶಕ್ತಿ ಗಟ್ಟಿಯಾಗಿದ್ದರೆ ಸಾಧನೆ ಮಾಡುವ ಬದ್ದತೆಯಿದ್ದರೆ ದೊಡ್ಡ ಸಾಧಕರಾಗಬಹುದು, ಉದ್ಯೋಗದಾತರಾಗಬಹುದು ಎನ್ನುವುದಕ್ಕೆ ಶಾಂಭವಿ ಸಂಸ್ಥೆ ಕಟ್ಟಿ ಎಷ್ಟೋ ಮಂದಿಗೆ ಉದ್ಯೋಗ ನೀಡಿದ ಅಪ್ಪು ಮರಕಾಲರೇ ಸಾಕ್ಷಿ ಎಂದರು.

ವಾಣಿಜ್ಯ ಸಂಕೀರ್ಣಗಳು  ಊರಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಊರಿನಲ್ಲಿ ಇಂತದ್ದೊಂದು ವ್ಯವಸ್ಥೆಯಿದ್ದರೆ ಸಕಲ ಕಾರ್ಯಕ್ರಮಗಳಿಗೂ ಅನುಕೂಲವಾಗುತ್ತದೆ.‌ ಸಮಾಜಕ್ಕೆ ಅಪ್ಪು ಮರಕಾಲ ಅವರ ಕುಟುಂಬ ನೀಡಿದ ಸೇವೆ ಗಮನಾರ್ಹವಾದುದು. ಅಪ್ಪು ಮರಕಾಲರು ಜೀವನದಲ್ಲಿ ಸಾಧನೆಗಳನ್ನು ಮಾಡುವಂತಾಗಲಿ. ಆತ್ರಾಡಿಯ ಈ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಊರಿಗೆ ಬೆಳಕಾಗಲಿ ಎಂದವರು ಶುಭ ಹಾರೈಸಿದರು.

ಉಡುಪಿಯ ಅಭಿವೃದ್ದಿಗೆ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಕೊಡುಗೆ: ಯಶ್ ಪಾಲ್ ಸುವರ್ಣ

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಉಡುಪಿ ಅಭಿವೃದ್ದಿಯ ಪಥದತ್ತ ಇನ್ನಷ್ಟು ವೇಗವಾಗಿ ಧಾಪುಗಾಲು ಇಡುತ್ತಿರುವ ಈ ಹೊತ್ತಿನಲ್ಲಿ  ಆತ್ರಾಡಿಯ ಈ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್, ಅಪ್ಪು ಮರಕಾಲರು ಉಡುಪಿಯ ಅಭಿವೃದ್ದಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಉಡುಪಿ ಮುಂದಿನ ದಿನಗಳಲ್ಲಿ ಮಹಾನಗರಪಾಲಿಕೆಯಾಗಲಿದೆ. ಆಗ ಆತ್ರಾಡಿ ಕೂಡ ಮಹಾನಗರ ಪಾಲಿಕೆಗೆ ಸೇರಲಿದೆ. ಅಪ್ಪು ಮರಕಾಲದ ದೂರದೃಷ್ಠಿಯಿಂದ ಆತ್ರಾಡಿಯೂ ಉಡುಪಿಯೂ ಇನ್ನಷ್ಟು ಬೆಳೆಯಲಿದೆ ಎನ್ನುವ ವಿಶ್ವಾಸವಿದೆ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ಉದ್ಯೋಗ ಕ್ಷೇತ್ರಕ್ಕೆ ಅಪ್ಪು ಮರಕಾಲರ ಕೊಡುಗೆ ಅಪಾರ: ಜಯಪ್ರಕಾಶ ಹೆಗ್ಡೆ

ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಮಾತನಾಡಿ, ಉದ್ಯೋಗ ನೀಡುವಲ್ಲಿ ಉಡುಪಿ ಜಿಲ್ಲೆಗೆ ಅಪ್ಪು ಮರಕಾಲರ ಪಾತ್ರ ಅಗಾಧ. ಊರು ಬೆಳೆಯುದೆಂದರೆ ಆ ಊರಿನ ಜನರಿಗೆ ಉದ್ಯೋಗ ಸಿಗೋದು ಕೂಡ ಆಗಿದೆ. ಉದ್ಯೋಗದಿಂದ ಊರು ಬೆಳೆಯುತ್ತದೆ. ಹಾಗೆ ಬೆಳೆಸಿದವರಲ್ಲಿ ಅಪ್ಪು ಮರಕಾಲರು ಪ್ರಮುಖರು ಎಂದು ಹೇಳಿದರು.

ದೂರದೃಷ್ಠಿಯ ಕನಸುಗಾರ ಅಪ್ಪು ಮರಕಾಲ: ವಿನಯ್ ಕುಮಾರ್ ಸೊರಕೆ

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಸಾಕಷ್ಟು ದೂರದೃಷ್ಟಿ ಇರುವ ವ್ಯಕ್ತಿ, ಅಪ್ಪು ಮರಕಾಲ ಅವರು. ಅವರ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಪ್ರತಿಷ್ಠಿತ ಜಾಗದಲ್ಲಿ ಸೃಷ್ಟಿಯಾಗಿದೆ. ಎಲ್ಲರನ್ನೂ ಸ್ವಾಗತಿಸುವ ಜಾಗದಲ್ಲಿದೆ ಸಂಸ್ಥೆಗೆ ಇನ್ನಷ್ಟು ಕೀರ್ತಿ ಲಭಿಸಲಿ ಎಂದರು.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೊಡ್ಡ ಸಂಸ್ಥೆಯೊಂದನ್ನು ಕಟ್ಟುವ ಕಾರ್ಯ ಸಾಮಾನ್ಯದ್ದಲ್ಲ, ಇಂಹ ಅಸಾಮಾನ್ಯ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಮರಕಾಲ ಅವರದ್ದು ಎಂದು ಹೇಳಿದರು.

ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಜನರಿಗೆ ಆಧುನಿಕ ಸೌಲಭ್ಯವೇ ಬೇಕು. ಅಂತಹ ಆಧುನಿಕ ಸೌಲಭ್ಯಗಳನ್ನು ನೀಡುವ ಹೊಟೇಲ್ ಶಾಂಭವಿಯಾಗಿದೆ. ಅಪ್ಪು ಮರಕಾಲರ ದೂರದೃಷ್ಟಿಯಿಂದ ಈ ಕಾರ್ಯ ನೆರವೇರಿದೆ, ಇಂತಹ ಉದ್ಯಮ ಆರಂಭಿಸಿದ್ದು ನಿಜಕ್ಕೂ ಸಾಹಸ ಎಂದರು.

ಉಡುಪಿ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್, ರಮೇಶ್ ಕಾಂಚನ್ ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಉಡುಪಿ ಇವರು ಮಾತನಾಡಿ ಶುಭ ಹಾರೈಸಿದರು.

ಸಂಸ್ಥೆಯ ಮಾಲಿಕರಾದ ಅಪ್ಪು ಮರಕಲ, ಶ್ರೀಮತಿ ಸೆಲಿನ್ ಅಪ್ಪು, ಫಾ.ರೋಮಿಯೋ ಲುವಿಸ್‌ ಕ್ರೈಸ್ಟ್ ಚರ್ಚ್ ಮಣಿಪಾಲ, ಉಜ್ವಲ್ ಡೆವಲಪರ್ & ಬಿಲ್ಡರ್ಸ್ ನ ಪುರುಷೋತ್ತಮ ಶೆಟ್ಟಿ, ಆತ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಶ್ರೀಮತಿ ಸೆಲಿನ್ ಅಪ್ಪು ಸ್ವಾಗತಿಸಿದರು,  ದಾಮೋಧರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ವೆಂಕಟಾಚಲ ಭಟ್, ದಿಲೀಪ್ ರಾಜ್ ಹೆಗ್ಡೆ, ಕಸ್ತೂರಿ ಅಡಿಗ  ಮೆಲ್ವಿನ್ ಡಿಕ್ರೋಸ್ ಅವರನ್ನು ಗೌರವಿಸಲಾಯ್ತು.

ಸಂಗೀತ ನಿರ್ದೇಶಕ, ಗಾಯಕ ವಿದ್ವಾನ್ ಯಶವಂತ ಎಂ.ಕೆ. ಇವರಿಂದ ಸಂಗೀತ ಕಾರ್ಯಕ್ರಮ ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯರೂಪಕ, ರಾತ್ರಿ ಸಿಡಿಮದ್ದು ಪ್ರದರ್ಶನ ನಡೆಯಿತು.