ಅಜೆಕಾರು: ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ಉದ್ಘಾಟನೆ

ಅಜೆಕಾರು: ಅಜೆಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮವು ಏ.14ರಂದು ನಡೆಯಿತು.

ವಾಣಿಜ್ಯ ಸಂಕೀರ್ಣ ಮಾತು ವಸತಿ ಸಮುಚ್ಚಯವನ್ನು ಅಜೆಕಾರು ಸೇಕ್ರೆಡ್ ಹಾರ್ಟ್ ನ ಧರ್ಮ ಗುರುಗಳಾದ ಪ್ರವೀಣ್ ಅಮೃತ್ ಮಾರ್ಟಿಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಳ್ಳಿಯ ಜನರು ಯಾವುದೇ ಸವಲತ್ತುಗಳಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಈ ಉದ್ಯಮ ಕೇವಲ ವಾಣಿಜ್ಯ ಚಟುವಟಿಕೆಗೆ ಸೀಮಿತವಾಗದ ಸಮಾಜವನ್ನು ಬೆಸೆಯುವ ಕಾರ್ಯ ಮಾಡಬೇಕು ಎಂದರು.

ಉದ್ಯಮಗಳು ಬೆಳೆದಾಗ ಹಳ್ಳಿಗಳ ಪ್ರಗತಿಯಾಗಲು ಸಾಧ್ಯ. ಅಜೆಕಾರಿನಂತಹ ಸಣ್ಣ ಊರಿನಲ್ಲಿ ಶಾಲೋಮ್ ಪ್ರಗತಿ ಎನ್ನುವ ವಾಣಿಜ್ಯ ಸಂಕೀರ್ಣದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ಸಿಗುವಂತಾಗಲಿ ಎಂದು ಸೂಪರ್ ಮಾರ್ಕೆಟ್ ವಿಭಾಗವನ್ನು ಉದ್ಘಾಟಿಸಿ ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಶೆಟ್ಟಿ ಹೇಳಿದರು.

ಅಜೆಕಾರು ಪದ್ಮ ಗೋಪಾಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಹಾವೀರ ಹೆಗ್ಡೆ, ಶೇಕ್ ಉಮ್ಮರ್ ಸಾಹೇಬ್, ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಪೂಜಾರಿ, ಪ್ರೇಮಾನಂದ ಶೆಣೈ, ಧರ್ಮೇಂದ್ರ ರೈ, ಕಟ್ಟಡದ ಪಾಲುದಾರ ಹರೀಶ್ ಶೆಟ್ಟಿ ಪಡುಕುಡೂರು ಉಪಸ್ಥಿತರಿದ್ದರು.

ಕಟ್ಟಡದ ಗುತ್ತಿಗೆದಾರ ಹಾಗೂ ವಿನ್ಯಾಸಕಾರರನ್ನು ಗೌರವಿಸಲಾಯಿತು.

ಕಟ್ಟಡದ ಪಾಲುದಾರ ಸುಜಯ್ ಶೆಟ್ಟಿ ಸ್ವಾಗತಿಸಿದರು. ಮತ್ತೊಬ್ಬ ಪಾಲುದಾರ ಗುರುಪ್ರಸಾದ್ ಶೆಟ್ಟಿ ನಿರೂಪಿಸಿ ವಂದಿಸಿದರು.