ಡಿಸೆಂಬರ್ ನಲ್ಲಿ ‘ಶಕಲಕ ಬೂಂ ಬೂಂ’ ತುಳು-ಕನ್ನಡ ಚಿತ್ರದ ಚಿತ್ರೀಕರಣ

ಉಡುಪಿ: ಕೋಸ್ಟಲ್‌ವುಡ್‌ ಸಿನಿಮಾಸ್‌ ಪ್ರಸ್ತುತಪಡಿಸುವ ಹಾರರ್‌ ಕಾಮಿಡಿ ಮಿಶ್ರಣವುಳ್ಳ ‘ಶಕಲಕ ಬೂಂ ಬೂಂ’ ತುಳು ಮತ್ತು -ಕನ್ನಡ ಚಿತ್ರದ ಚಿತ್ರೀಕರಣ ಡಿಸೆಂಬರ್‌ ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ನಿರ್ದೇಶಕ ಶ್ರೀಶ ಎಳ್ಳಾರೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಚಿತ್ರದ ಕಥೆ ಐದು ಮಂದಿಯ ನಡುವೆ ಸಾಗಲಿದ್ದು, ಇದಕ್ಕಾಗಿ ಪರ್ಕಳ ಕಬ್ಯಾಡಿಯ ಮನೆಯೊಂದರಲ್ಲಿ ಸೆಟ್‌ ಹಾಕಲಾಗುವುದು. ಉಳಿದಂತೆ ಉಡುಪಿ, ಮಣಿಪಾಲ, ಕಾರ್ಕಳ, ಮಂಗಳೂರು, ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದರು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರವಿಂದ ಬೋಳಾರ್‌, ಉಮೇಶ್‌ ಮಿಜಾರು, ರವಿರಾಮಕುಂಜ, ರೂಪಶ್ರೀ ವರ್ಕಾಡಿ, ವಸಂತ ಮುನಿಯಾಲು, ಮನೋಹರ ನಂದಳಿಕೆ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. 50 ಲಕ್ಷ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಚಿತ್ರದ ನಾಯಕರಾದ ಎಸ್‌ಪಿಎಲ್‌, ಗಾಡ್ವಿನ್‌ ಸ್ಪಾರ್ಕ್‌ಲ್‌, ನಿರ್ಮಾಪಕ ನಿತ್ಯಾನಂದ ನರಸಿಂಗೆ, ವಿಘ್ನೇಶ್‌ ಕುಲಾಲ್‌, ಸೌಮ್ಯಾ ಆರ್‌. ಮೆಂಡನ್‌ ಗೋಷ್ಠಿಯಲ್ಲಿ‌ ಇದ್ದರು.