ಅ.22 ರಂದು ಶಕಲಕ ಬೂಮ್ ಬೂಮ್ ಶೀರ್ಷಿಕೆ ಹಾಡು ಬಿಡುಗಡೆ

ಉಡುಪಿ: ದೀಪಾವಳಿಯ ಶುಭ ಸಂದರ್ಭದಲ್ಲಿ ಅ.22 ರಂದು ಶಕಲಕ ಬೂಮ್ ಬೂಮ್ ತುಳು ಹಾರರ್, ಕಾಮಿಡಿ , ಸಸ್ಪೆನ್ಸ್ ಚಿತ್ರದ ಶೀರ್ಷಿಕೆ ಹಾಡನ್ನು ಉಡುಪಿಯ ಶಾಸಕ ಕೆ. ರಘುಪತಿ ಭಟ್ ರವರು ಜಸ್ಟ್ ರೋಲ್ ಫಿಲ್ಮ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಿರುವರು.

ಹಾಡಿನ ಸಾಹಿತ್ಯವನ್ನು ಪ್ರಶಾಂತ್ ಸಿಕೆ ಬರೆದಿದ್ದರೆ ಸಂಗೀತ ಸಂಯೋಜನೆಯನ್ನು ಡಾಲ್ವಿನ್ ಕೊಳಲಗಿರಿ ಮಾಡಿದ್ದಾರೆ. ಸಂಕಲನಕಾರರಾಗಿ ಪ್ರಜ್ವಲ್ ಸುವರ್ಣ ದುಡಿದಿದ್ದಾರೆ.

ಚಿತ್ರವು ಡಿ.16 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.