ವಿಭಿನ್ನ ಕಥಾ ಹಂದರದ ತುಳು ಚಲನ ಚಿತ್ರ ಶಕಲಕ ಬೂಂ ಬೂಂ

ಉಡುಪಿ: ವಿಭಿನ್ನ ಚಿತ್ರ “ಶಕಲಕ ಬೂಂ ಬೂಂ” ತುಳು ಚಿತ್ರರಂಗಕ್ಕೆ ವಿಭಿನ್ನವಾದ ಕಥಾ ಹಂದರದೊಂದಿಗೆ ಮೂಡಿ ಬಂದು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ “ಶಕಲಕ ಬೂಂ ಬೂಂ”. ಏಕತಾನತೆ ಶರಣಾಗದೆ ವಿಭಿನ್ನತೆಗೆ ಒತ್ತು ನೀಡಿ ರಚಿಸಿದ ಅದ್ಭುತವಾದ ಕಾಮಿಡಿ, ಹಾರರ್, ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ. ಐಷಾರಾಮಿ ಜೀವನ ನಡೆಸಲು, ಸುಲಭವಾಗಿ ಧನ ಸಂಪಾದಿಸಲು ಅಡ್ಡದಾರಿ ಹಿಡಿದ 5 ಜನ ಒಂದು ಸಂದೇಶದ ಮುಖೇನ ಪುರಾತನವಾದ ಪಾಳು ಬಿದ್ದ ಮನೆಯಲ್ಲಿ ನಡೆಯುವ ಅಚಾತುರ್ಯಗಳು, ವಿಚಿತ್ರವಾದ ದೃಷ್ಟಾಂತಗಳಿಂದ ಬೇಸತ್ತು ಅವರು ಮಂತ್ರವಾದಿಯನ್ನು ಕರೆದು ಇದರ ಸೂಕ್ಷ್ಮತೆ ಹಾಗೂ ನಿಜ ವಿಚಾರ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.

ಆ ಪಾಳು ಬಿದ್ದ ಮನೆಯಲ್ಲಿ ನಡೆದ ವಿಪರ್ಯಾಸಗಳು, ಘಟನೆಗಳೇನು? ಮನೆಯ ಮೂಲ ಕಥೆ ಏನು? ಅಲ್ಲಿ ಏನಾಗಿರಬಹುದು? ಎಂಬ ವಿಶಿಷ್ಟವಾದ ಕಥಾನಕ ಹೊಂದಿರುವ, ತುಳುವಿನಲ್ಲಿ ಕಾಮಿಡಿಯೊಂದಿಗೆ ಇತರ ವಿಚಾರಗಳನ್ನು ಮಿಶ್ರಗೊಳಿಸಿ ಎಲ್ಲಾ ವಯೋಮಾನದ ವರನ್ನು, ವಿವಿಧ ಸ್ಥರದ ಪ್ರೇಕ್ಷಕರನ್ನು ಸೆಳೆಯುವ ಹಾಗೂ ಜನರಿಗೆ, ರಂಜನೆಯೊಂದಿಗೆ ಸಂದೇಶ, ನೀತಿ, ಪ್ರೀತಿ, ಭಾಂದವ್ಯ, ಸತ್ಯಾಸತ್ಯತೆ, ಮೋಸ, ವಂಚನೆ, ಅಸಹಾಯಕತೆಯ ಎಡೆಗೆ ಬೆಳಕು ಚೆಲ್ಲಿ ಉಡುಪಿಗೆ 150 ವರ್ಷಗಳ ಹಳೆಯ ಮನೆ ಹಾಗೂ ಸುತ್ತಮುತ್ತಲು, ಚಿಕ್ಕ ಮಂಗಳೂರು, ಕುದುರೆಮುಖದಂತಹ ಸುಂದರವಾದ ಪರಿಸರದಲ್ಲಿ ಚಿತ್ರೀಕರಿಸಿ ಚಿತ್ರರಂಗದಲ್ಲಿ ಬದಲಾವಣೆಯ ಪರ್ವವನ್ನು ಬರೆಯಲು ಹೊರಡಿರುವವರು ಯುವ ನಿರ್ದೇಶಕ ಶ್ರೀಶ ಎಳ್ಳಾರೆಯವರು.

ಜನವರಿ 20ರಂದು ತೆರೆ ಕಂಡಿರುವ ಈ ಚಿತ್ರ ಜನಮಾನಸದಲ್ಲಿ ಅಚ್ಚಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ. ಈ ತಂಡದ ಹೊಸ ಸಾಹಸಕ್ಕೆ ನಮ್ಮ ಪ್ರೋತ್ಸಾಹ ಸಹಕಾರ ಅಗತ್ಯ. ತುಳುನಾಡಿರ ಸಮಗ್ರ ಜನತೆ ಈ ಚಿತ್ರ ವೀಕ್ಷಿಸಿ ಇವರ ಕಾರ್ಯಕ್ಕೆ ಬೆಂಬಲಿಸಿ.

-ಪಡ್ರೆ, ಮಣಿಪಾಲ