ಮಣಿಪಾಲ: ಯುಎನ್ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಜ. 20 ರಂದು ಬಿಡುಗಡೆಯಾಗಲಿರುವ ‘ಶಕಲಕ ಬೂಂ ಬೂಂ’ ಚಿತ್ರದ ಟ್ರೈಲರ್ ಬಿಡುಗಡೆ ಮತ್ತು ಪ್ರೀಮಿಯರ್ ಶೋ ಮಣಿಪಾಲದ ಭಾರತ್ ಸಿನೆಮಾಸ್ ನಲ್ಲಿ ಬುಧವಾರ ನಡೆಯಿತು.
ಟ್ರೈಲರ್ ಬಿಡುಗಡೆಗೊಳಿಸಿದ ಚಿತ್ರನಟಿ ವಿದುಷಿ ಮಾನಸಿ ಸುಧೀರ್ ಮಾತನಾಡಿ, ಜ್ಯೋತಿ ಬೆಳಗುವಂತೆ ಈ ಚಿತ್ರವೂ ಬೆಳಗಲಿ, ಚಿತ್ರ ತಂಡದ ಶ್ರಮಕ್ಕೆ ತಕ್ಕ ಫಲ ಲಭಿಸಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನರಸಿಂಗೆ ಶ್ರೀ ನರಸಿಂಹ ದೇಗುಲದ ಅರ್ಚಕ ಶ್ರೀನಿವಾಸ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.
ಮಣಿಪಾಲ ಸೋನಿಯಾ ಕ್ಲಿನಿಕ್ ನ ವೈದ್ಯೆ ಡಾ.ಗಿರಿಜಾ ಮಾತನಾಡಿ, ಸಿನೆಮಾ ಯಶಸ್ವಿಯಾಗುವುದರೊಂದಿಗೆ 100 ದಿನಗಳ ಕಾಲ ಪ್ರದರ್ಶನ ಕಂಡು ದೊಡ್ಡ ಮಟ್ಟದ ಹೆಸರು ಗಳಿಸಲಿ ಎಂದರು.
ಪರ್ಕಳ ಶ್ರೀ ದುರ್ಗಾ ಪರಮೇಶ್ವರೀ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹರೀಶ್ ಭಾರದ್ವಾಜ್, ರೋಟರಿ ಮಣಿಪಾಲ ಟೌನ್ ನ ಶೇಷಪ್ಪ ರೈ, ನೃತ್ಯ ನಿಕೇತನ ಕೊಡವೂರು ಸಂಚಾಲಕ ಸುಧೀರ್ ರಾವ್ ಕೊಡವೂರು, ಚಿತ್ರದ ನಿರ್ಮಾಪಕ ಉಮೇಶ್ ಪ್ರಭು ಮಾಣಿಬೆಟ್ಟು, ನಿರ್ದೇಶಕ ಶ್ರೀಶ ಎಳ್ಳಾರೆ, ನಾಯಕ ನಟ ಗಾಡ್ವಿನ್ ಸ್ಪಾರ್ಕಲ್ ಉಪಸ್ಥಿತರಿದ್ದರು.
ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ ಸ್ವಾಗತಿಸಿ, ನಿರೂಪಿಸಿದರು.