ಮೆಕ್ಸಿಕೋ ಕಾಲ್​ಸೆಂಟರ್​ನ ಏಳು ಸಿಬ್ಬಂದಿ ನಾಪತ್ತೆ

ಮೆಕ್ಸಿಕೋ ಸಿಟಿ: ಉತ್ತರ ಅಮೆರಿಕ ಖಂಡದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋ ದೇಶದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸುಮಾರು 45 ಚೀಲಗಳಲ್ಲಿ ಮಾನವ ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯರ ವಿಚಾರಣೆ ವೇಳೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪಶ್ಚಿಮ ಮೆಕ್ಸಿಕೋದಲ್ಲಿ ಕಳೆದ ವಾರದಿಂದ ಕಾಣೆಯಾದ ಏಳು ಜನರ ಹುಡುಕಾಟದ ಸಂದರ್ಭದಲ್ಲಿ 45 ಚೀಲಗಳು ಪತ್ತೆಯಾಗಿದ್ದು, ಮಾನವ ಅಂಗಾಂಗಗಳು ಇರುವುದು ಬೆಳಕಿಗೆ ಬಂದಿದೆ.

ಸ್ಥಳೀಯ ಅಧಿಕಾರಿಗಳು ಬಹಿರಂಗಪಡಿಸಿದ ವಿವರಗಳ ಪ್ರಕಾರ, ಜಲಿಸ್ಕೋ ರಾಜ್ಯದ ಕೈಗಾರಿಕಾ ಪ್ರದೇಶವಾದ ಗ್ವಾಡಲಜಾರಾ ಬಳಿಯ ಕಣಿವೆಯಲ್ಲಿ 45 ಚೀಲಗಳಲ್ಲಿ ಮಾನವ ದೇಹದ ಭಾಗಗಳನ್ನು ಪತ್ತೆ ಹಚ್ಚಲಾಗಿದೆ. ಈ ವಿಚಾರವನ್ನು ರಾಜ್ಯ ಪ್ರಾಸಿಕ್ಯೂಟರ್ ಕಚೇರಿಯು ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದು, ಅವು ಮಹಿಳೆ ಮತ್ತು ಪುರುಷ ದೇಹದ ಭಾಗಗಳಾಗಿವೆ. ಮೇ 20 ರಂದು ಸುಮಾರು 30 ವರ್ಷ ವಯಸ್ಸಿನ ಏಳು ಯುವತಿಯರು ನಾಪತ್ತೆಯಾಗಿದ್ದರು. ಅವರ ನಾಪತ್ತೆ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಅವರೆಲ್ಲರೂ ಒಂದೇ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಾಪತ್ತೆ ಪ್ರಕರಣಗಳು ಬೇರೆ ಬೇರೆ ದಿನಗಳಲ್ಲಿ ವರದಿಯಾಗಿದ್ದವು
. ಅಕ್ರಮ ನಡೆದಿರುವ ಆರೋಪವಿದೆ. ಡ್ರಗ್ಸ್, ರಕ್ತದ ಕಲೆಗಳು ಮತ್ತು ಕೆಲವು ದಾಖಲೆಗಳು ಸಿಕ್ಕಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಿಧಿವಿಜ್ಞಾನ ಅಧಿಕಾರಿಗಳು ಮೃತದೇಹಗಳ ಸಂಖ್ಯೆ ಮತ್ತು ಸಾವಿನ ಕಾರಣ, ಅವರ ಗುರುತುಗಳನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು, ಪೊಲೀಸರು ಮತ್ತು ಹೆಲಿಕಾಪ್ಟರ್ ಸಿಬ್ಬಂದಿಯನ್ನು ಒಳಗೊಂಡ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಈ ಮಧ್ಯೆ 45 ಬ್ಯಾಗ್​ಗಳು ಸಿಕ್ಕಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಗ್ವಾಡಲಜಾರಾದ ಜಾರ್ಡಿನ್ಸ್ ವಲ್ಲರ್ಟಾ ಮತ್ತು ಲಾ ಎಸ್ಟಾನ್ಸಿಯಾ ನೆರೆಹೊರೆಯಲ್ಲಿನ ಎರಡು ಫಾರ್ಮ್‌ಗಳಿಂದ ಏಳು ಜನ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಏಳು ಜನರ ಅವಶೇಷಗಳು ಅವರದ್ದೇ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ.
2021 ರಲ್ಲಿ ಟೋನಾಲಾ ಪ್ರದೇಶದಲ್ಲಿ 70 ಚೀಲಗಳಲ್ಲಿ ಅವಶೇಷಗಳು ಕಂಡುಬಂದಿವೆ. ಆಗ ಅವರು 11 ಮಂದಿಯ ಮೃತದೇಹಗಳು ಎಂದು ತಿಳಿದುಬಂದಿತ್ತು. 2019 ರಲ್ಲಿ 29 ವ್ಯಕ್ತಿಗಳಿಗೆ ಸೇರಿದ 119 ಚೀಲಗಳನ್ನು ಗುರುತಿಸಲಾಗಿತ್ತು. 2018 ರಲ್ಲಿ ಮೂವರು ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ ದೇಶದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಜಲಿಸ್ಕೋ ರಾಜ್ಯದಲ್ಲಿ ಚೀಲಗಳಲ್ಲಿ ಮಾನವ ದೇಹದ ಭಾಗಗಳು ಪತ್ತೆಯಾಗಿರುವುದು ಇದೇ ಮೊದಲಲ್ಲ ಎಂದು ತಿಳಿದು ಬಂದಿದೆ