ದಿವ್ಯಾಂಗರ ಸೇವೆ ದೇವರ ಸೇವೆಗೆ ಸಮಾನ: ವಿಜಯ್ ಕೊಡವೂರು

ಉಡುಪಿ: ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀ ಕೃಷ್ಣಾಪುರ ಮಠ ಉಡುಪಿ ಇವರ ಆಶೀರ್ವಾದ ಹಾಗೂ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಮಟ್ಟದ ಸಮಗ್ರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಉಡುಪಿ ಜಿಲ್ಲೆ, ದಿವ್ಯಾಂಗರ ರಕ್ಷಣಾ ಸಮಿತಿ ಕೊಡವೂರು

ಇವರ ಸಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ದಿವ್ಯಾಂಗರ ಬೃಹತ್ ಸಮಾವೇಶ ಪ್ರತಿಭಾ ಪ್ರದರ್ಶನ ಹಾಗೂ ದಿವ್ಯಾಂಗರ ಕರ ಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವು ಡಿ.16 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯ ವಿಜಯ್ ಕೊಡವೂರು, ದಿವ್ಯಾಂಗರಿಗೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಅಸಾಧ್ಯ. ದಿವ್ಯಾಂಗರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ.
ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲೋಸುಗ ಅವರೇ ತಯಾರು ಮಾಡಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾವು ಬದುಕುವುದರ ಜೊತೆಗೆ ಅವರಿಗೂ ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡಬೇಕು. ಅವರಿಗೆ ಅವಕಾಶ ಬೇಕು ಹೊರತು ಅನುಕಂಪವಲ್ಲ. ಸಮಾಜದ ನಡುವೆ ಇರುವ ಅಂಗವಿಕಲರನ್ನು ದತ್ತು ಸ್ವೀಕಾರ ಮಾಡಿ ಈ ಮೂಲಕ ಉಡುಪಿ ಜಿಲ್ಲೆ ದೇಶದಲ್ಲೇ ಮಾದರಿ ಜಿಲ್ಲೆಯಾಗಿ ಹೊರಹೊಮ್ಮಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಲವಾರು ದಿವ್ಯಾಂಗರು ಭಾಗವಹಿಸಿದ್ದರು.