ದ್ವಿತೀಯ ಪಿಯು ಪೂರಕ ಪರೀಕ್ಷೆಯ ವೇಳಾಪಟ್ಟಿ ಬದಲು: ಪರಿಷ್ಕೃತ ವೇಳಾಪಟ್ಟಿಯಂತೆ ಸೆ. 7ರಿಂದ 19ರ ವರೆಗೆ ಪರೀಕ್ಷೆ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬದಲಾಗಿದೆ. ಸೆಪ್ಟಂಬರ್ 7 ರಿಂದ 18ರ ವರೆಗೆ ನಿಗದಿಯಾಗಿದ್ದ ಪರೀಕ್ಷೆಯ ವೇಳಾಪಟ್ಟಿ ತಾಂತ್ರಿಕ ಕಾರಣದಿಂದ ಬದಲಾಗಿದ್ದು, ನೂತನ ವೇಳಾಪಟ್ಟಿಯ ಪ್ರಕಾರ ಸೆಪ್ಟಂಬರ್ 07ರಿಂದ 19ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ. ಕನಗವಲ್ಲಿ ಮಾಹಿತಿ ನೀಡಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ ವಿವರ ಈ ಕೆಳಗಿನಂತಿದೆ:
ಬೆಳಿಗ್ಗೆಯ ಪರೀಕ್ಷೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಮಧ್ಯಾಹ್ನದ ಪರೀಕ್ಷೆ 2.15ರಿಂದ ಸಂಜೆ 5.30ರ ವರೆಗೆ ನಡೆಯಲಿದೆ.

ಸೆ. 7ರಂದು ಬೆಳಿಗ್ಗೆ- ಉರ್ದು, ಸಂಸ್ಕೃತ ಹಾಗೂ ಮಧ್ಯಾಹ್ನ- ಇನ್ ಫಾರ್ಮೇಷನ್ ಟೆಕ್ನಾಲಜಿ, ರಿಟೇಲ್, ಅಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ ನೆಸ್, ಹೋಂ ಸೈನ್ಸ್ (NSQF). ಸೆ. 8ರಂದು ಬೆಳಿಗ್ಗೆ ಹಿಸ್ಟರಿ, ಸ್ಟ್ಯಾಟಿಸ್ಟಿಕ್ಸ್, ಬಯಾಲಜಿ ಹಾಗೂ ಮಧ್ಯಾಹ್ನ ಪರೀಕ್ಷೆ ಇಲ್ಲ.

ಸೆ. 9ರಂದು ಬೆಳಿಗ್ಗೆ- ಹಿಂದಿ ಹಾಗೂ ಮಧ್ಯಾಹ್ನ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬ್ ಮತ್ತು ಫ್ರೆಂಚ್. ಸೆ. 10ರಂದು ಬೆಳಿಗ್ಗೆ- ಇಂಗ್ಲಿಷ್ ಹಾಗೂ ಮಧ್ಯಾಹ್ನ ಪರೀಕ್ಷೆ ಇಲ್ಲ.

ಸೆ. 11ರಂದು ಬೆಳಿಗ್ಗೆ ಕನ್ನಡ (ಐಚ್ಛಿಕ), ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಹಾಗೂ
ಮಧ್ಯಾಹ್ನ ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್, ಜಿಯಾಲಜಿ.
ಸೆ. 12ರಂದು ಬೆಳಿಗ್ಗೆ ಎಕನಾಮಿಕ್ಸ್, ಫಿಸಿಕ್ಸ್ ಹಾಗೂ ಮಧ್ಯಾಹ್ನ ಪರೀಕ್ಷೆ ಇಲ್ಲ.

ಸೆ. 14ರಂದು ಬೆಳಿಗ್ಗೆ ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ, ಎಜುಕೇಷನ್ ಹಾಗೂ
ಮಧ್ಯಾಹ್ನ ಪರೀಕ್ಷೆ ಇಲ್ಲ. ಸೆ. 15ರಂದು ಬೆಳಿಗ್ಗೆ ಕನ್ನಡ ಹಾಗೂ ಮಧ್ಯಾಹ್ನ ಪರೀಕ್ಷೆ ಇಲ್ಲ.

ಸೆ.16ರಂದು ಬೆಳಿಗ್ಗೆ ಪೊಲಿಟಿಕಲ್ ಸೈನ್ಸ್, ಬೇಸಿಕ್ ಮ್ಯಾತ್ಸ್ ಹಾಗೂ ಮಧ್ಯಾಹ್ನ ಪರೀಕ್ಷೆ ಇಲ್ಲ. ಸೆ. 17ರಂದು ಸರ್ಕಾರಿ ರಜೆ

ಸೆ. 18ರಂದು ಬೆಳಿಗ್ಗೆ ಸೋಷಿಯಾಲಜಿ, ಅಕೌಂಟೆನ್ಸಿ, ಮ್ಯಾತಮೆಟಿಕ್ಸ್ ಹಾಗೂ ಮಧ್ಯಾಹ್ನ ಪರೀಕ್ಷೆ ಇಲ್ಲ. ಸೆ. 19ರಂದು ಬೆಳಿಗ್ಗೆ ಜಿಯಾಗ್ರಫಿ ಹಾಗೂ ಮಧ್ಯಾಹ್ನ ಮನಶಾಸ್ತ್ರ (ಸೈಕಾಲಜಿ)