ಉಡುಪಿ: ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೃಪತುಂಗ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಸಾಹಿತಿ ವೈದೇಹಿ ಹಾಗೂ ಶ್ರೀನಿವಾಸ್ ಮೂರ್ತಿಯವರನ್ನು ಅವರ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕು ಘಟಕದಿಂದ ಗೌರವಿಸಲಾಯಿತು.
ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ,ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ವಿ. ಮನೋಹರ್ , ಕವಯಿತ್ರಿ ಸ್ಪೂರ್ತಿ ಗಿರೀಶ್, ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ ,ಸದಸ್ಯರಾದ ಭುವನಪ್ರಸಾದ ಹೆಗ್ಡೆ, ನಾರಾಯಣ ಮಾಡಿ, ನರಸಿಂಹಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.