ಉಡುಪಿ: ಜಮ್ಮು ಕಾಶ್ಮೀರ ಸರಕಾರದ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಿರಿಯಡಕ ಮೂಲದ ಹಿರಿಯ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್ ಅವರನ್ನು ಕೇಂದ್ರ ಸರಕಾರದ ಗೃಹ ಸಚಿವಾಲಯ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಾಗಿ ನಿಯುಕ್ತಿಗೊಳಿಸಿದೆ.
ಎಚ್.ರಾಜೇಶ್ ಪ್ರಸಾದ್ ಮೂಲತಃ ಹಿರಿಯಡಕದ ಬೊಮ್ಮಾರಬೆಟ್ಟಿನವರು. ತಮ್ಮ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಶಿಕ್ಷಣವನ್ನು ಬೊಮ್ಮಾರಬೆಟ್ಟು ಮತ್ತು ಹಿರಿಯಡಕ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಮುಗಿಸಿ ವಾಣಿಜ್ಯ ಶಾಸ್ತ್ರ ಪದವಿ ಶಿಕ್ಷಣವನ್ನು ಎಂಜಿಎಂ ಕಾಲೇಜಿನಲ್ಲಿ ಪಡೆದಿದ್ದರು. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.


















