ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರು ಆಯ್ಕೆಯಾಗಿದ್ದಾರೆ.
ವಾರ್ಷಿಕ ಗೌರವ ಪ್ರಶಸ್ತಿ: ಡಾ. ಚಂದ್ರಶೇಖರ್ ದಾಮ್ಲೆ (ದಕ್ಷಿಣ ಕನ್ನಡ), ಡಾ. ಆನಂದರಾಮ ಉಪಾಧ್ಯ (ಬೆಂಗಳೂರು), ಡಾ. ರಾಮಕೃಷ್ಣ ಗುಂದಿ (ಉತ್ತರ ಕನ್ನಡ), ಕೆ.ಸಿ. ನಾರಾಯಣ (ಬೆಂಗಳೂರು ಗ್ರಾಮಾಂತರ), ಡಾ. ಚಂದ್ರು ಕಾಳೇನಹಳ್ಳಿ (ಹಾಸನ) ಅವರು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿ:
ನಲ್ಲೂರು ಜನಾರ್ದನ್ ಆಚಾರ್ (ಚಿಕ್ಕಮಗಳೂರು), ಉಬರಡ್ಕ ಉಮೇಶ್ ಶೆಟ್ಟಿ ( ದಕ್ಷಿಣ ಕನ್ನಡ), ಕುರಿಯ ಗಣ್ತಿ ಶಾಸ್ತ್ರಿ (ಕಾಸರಗೋಡು), ಆರ್ಗೊಡು ಮೋಹನದಾಸ್ ಶೆಣೈ (ಉಡುಪಿ), ಮಹಮ್ಮದ್ ಗೌಸ್ (ಉಡುಪಿ), ಮುರೂರು ರಾಮಚಂದ್ರ ಹೆಗಡೆ (ಉತ್ತರ ಕನ್ನಡ), ಎಂ.ಎನ್. ಹೆಗಡೆ ಹಳವಳ್ಳಿ (ಉತ್ತರ ಕನ್ನಡ), ಹಾರಾಡಿ ಸರ್ವೋತ್ತಮ ಗಾಣಿಗ (ಉಡುಪಿ), ಬಿ.ರಾಜಣ್ಣ (ತುಮಕೂರು), ಎ.ಜಿ. ಅಶ್ವತ್ಥನಾರಾಯಣ ( ತುಮಕೂರು) ಅವರು ‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಹೊಸ್ತೋಟ ಮಂಜುನಾಥ ಭಾಗವತ ಅವರ ‘ಯಕ್ಷಗಾನ ವೀರಾಂಜನೇಯ ವೈಭವ’, ಕೃಷ್ಣಪ್ರಕಾಶ ಉಳಿತ್ತಾಯ ಅವರ ‘ಅಗರಿ ಮಾರ್ಗ’ ಹಾಗೂ ಡಾ. ಚಿಕ್ಕಣ್ಣ ಯಣ್ಣೆಕಟ್ಟಿ ಅವರ ‘ಮೂಡಲಪಾಯ ಯಕ್ಷಗಾನ ಬಯಲಾಟ ಒಂದು ಅಧ್ಯಯನ’ ಪುಸ್ತಕವು ‘ಪುಸ್ತಕ ಬಹುಮಾನಕ್ಕೆ ಭಾಜನವಾಗಿದೆ.
ಪಾರ್ತಿಸುಬ್ಬ ಪ್ರಶಸ್ತಿಯು ₹ 1 ಲಕ್ಷ ನಗದು, ವಾರ್ಷಿಕ ಗೌರವ ಪ್ರಶಸ್ತಿಯು ₹ 50 ಸಾವಿರ ನಗದು, ಪುಸ್ತಕ ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.