ಹೊಸ ಸಂಶೋಧನೆಯಿಂದ ಹೊರ ಬಂತು ಸೀಕ್ರೇಟ್: ನದಿಯಲ್ಲಿ ಅಪರೂಪದ ಲೋಹ ಪತ್ತೆ!

ಇನ್‌ಸ್ಟಿಟ್ಯೂಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರೆಸ್ಮಿ ಸೆಬಾಸ್ಟಿಯನ್ ನೇತೃತ್ವದ ತಂಡವು ಈ ಮಹತ್ವದ ಆವಿಷ್ಕಾರವನ್ನು ಮಾಡಿದೆ. “ನನ್ನ ಸಂಶೋಧನಾ ವಿದ್ಯಾರ್ಥಿಯೊಬ್ಬರು (Student) ಸಟ್ಲೆಜ್ ನದಿಯ ಮರಳಿನ ಗುಣಲಕ್ಷಣಗಳ ಮೇಲೆ ಪ್ರಯೋಗಗಳನ್ನು ನಡೆಸುವಾಗ ಟ್ಯಾಂಟಲಮ್ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ ” ಎಂದು ಅವರು ಹೇಳಿದ್ದಾರೆ.ಪಂಜಾಬ್‌ನ ಸಟ್ಲೆಜ್ ನದಿ ಮರಳಿನಲ್ಲಿ ರೋಪರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಸಂಶೋಧಕರು ಅಪರೂಪದ ಲೋಹವನ್ನು ಪತ್ತೆ ಹಚ್ಚಿದ್ದಾರೆ. ಸಟ್ಲೆಜ್ ನದಿ ತೀರದ ಮರಳಿನಲ್ಲಿ ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಯಲ್ಲಿ ಬಳಸುವ ಅಪರೂಪದ ಲೋಹವಾದ ಟ್ಯಾಂಟಲಮ್ ಇರುವಿಕೆಯನ್ನು ಐಐಟಿ ಸಂಶೋಧಕರ (IIT Research) ತಂಡ ಪತ್ತೆ ಮಾಡಿದೆ.

ಟ್ಯಾಂಟಲಮ್‌ ತುಂಬಾ ಅಪರೂಪದ ಲೋಹವಾಗಿರುವ ಕಾರಣ ಲೋಹಗಳನ್ನು ಗಣಿಗಾರಿಕೆ ಮಾಡಲು ಆರ್ಥಿಕ ಸದೃಢತೆಗೆ ರಾಜ್ಯ ಸಾಗಲು ಇದು ಒಂದೊಳ್ಳೆ ಮಾರ್ಗವಾಗಬಹುದು ಎಂದು ಸಂಶೋಧಕರ ತಂಡವು ಹೇಳಿದೆ.ವಿದ್ಯಾರ್ಥಿಗಳ ತಂಡ ಸಟ್ಲೆಜ್ ಜಲಾನಯನ ಪ್ರದೇಶದಿಂದ ಸಂಗ್ರಹಿಸಲಾದ ಮಾದರಿಗಳನ್ನು ತೆಗೆದುಕೊಂಡು ಕೇವಲ ಮಣ್ಣು ಮತ್ತು ಬಂಡೆಗಳ ಡೈನಾಮಿಕ್ ಗುಣಲಕ್ಷಣಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿತ್ತು. ಆದರೆ ಈ ಅಧ್ಯಯನದ ನಡುವೆಯೇ ನದಿ ತೀರದ ಮಣ್ಣಿನಲ್ಲಿ ಈ ಲೋಹ ಕಂಡು ಬಂದಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್‌ಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತಿರುವ ಕಾರಣ ಇದರ ಮೌಲ್ಯ ಕೂಡ ಹೆಚ್ಚಾಗಿದೆ. ನದಿಯಲ್ಲಿ ದೊರೆತಿರುವ ಲೋಹದ ಕ್ವಾಂಟಮ್ ಅನ್ನು ತಿಳಿದುಕೊಳ್ಳಲು ನಮಗೆ ಕುತೂಹಲವಿದೆ” ಎಂದು ಅವರು ತಿಳಿಸಿದರು.ಪಂಜಾಬ್ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಅಭಿಜೀತ್ ಕಪ್ಲಿಶ್ ಮಾತನಾಡಿ, “ಸಟ್ಲೆಜ್‌ನಲ್ಲಿ ಟ್ಯಾಂಟಲಮ್ ಆವಿಷ್ಕಾರವು ಪಂಜಾಬ್‌ಗೆ ಮಾತ್ರವಲ್ಲದೆ ಭಾರತಕ್ಕೆ ಮಹತ್ವದ್ದಾಗಿದೆ.

ಬಹುಶಃ ಇದು ಚೀನಾದಿಂದ ಬರುತ್ತಿರಬಹುದು, ಏಕೆಂದರೆ ಸಟ್ಲೆಜ್‌ನ ಜಲಾನಯನ ಪ್ರದೇಶದ 80 ಪ್ರತಿಶತವು ಚೀನಾದಲ್ಲಿದೆ, ಟಿಬೆಟ್ನಲ್ಲಿದೆ. ಹೀಗಾಗಿ ಇಲ್ಲಿಂದ ಬಂದಿರುವ ಸಾಧ್ಯತೆ ಕೂಡ ಇದೆ. ಈ ಬಗ್ಗೆ ತನಿಖೆಯಿಲ್ಲದೆ ನಾವು ಅದರ ಮೂಲದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು. ಒಟ್ಟಿನಲ್ಲಿ ಐಐಟಿ ರೋಪರ್ ಸಂಶೋಧಕರು ಸಟ್ಲೆಜ್ ನದಿಯಲ್ಲಿ ಈ ಅಪರೂಪದ ಲೋಹವನ್ನು ಕಂಡುಹಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯಂತೆ ಭಾರತವು ಸೆಮಿಕಂಡಕ್ಟರ್ ಮತ್ತು ಚಿಪ್ ತಯಾರಿಕೆ ಉದ್ಯಮದ ಜಾಗತಿಕ ಕೇಂದ್ರವಾಗಲು ಸಹಾಯ ಮಾಡಬಹುದು

ಸಟ್ಲೆಜ್‌ನಲ್ಲಿನ ಟ್ಯಾಂಟಲಮ್‌ನ ಮೂಲವು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಹಿಮಾಲಯ ಪ್ರದೇಶದಲ್ಲಿನ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದಾಗಿ ಇದು ಅಪರೂಪದ ಲೋಹವನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಡಾ ಸೆಬಾಸ್ಟಿಯನ್ ಹೇಳಿದ್ದಾರೆ. “ಯುರೇಷಿಯನ್ ಪ್ಲೇಟ್ ಕಡೆಗೆ ಭಾರತೀಯ ತಟ್ಟೆಯ ಚಲನೆಯಿಂದಾಗಿ ಟ್ಯಾಂಟಲಮ್ ನದಿಗಳ ಜಲಾನಯನ ಪ್ರದೇಶದಲ್ಲಿ ಉಂಟಾಗಬಹುದು. ಈ ಚಲನೆಯು ಹಿಮಾಲಯ ಪ್ರದೇಶದಲ್ಲಿ ಭೂಕಂಪನ ಚಟುವಟಿಕೆಯನ್ನು ಉಂಟುಮಾಡುತ್ತದೆ” ಎಂದು ಅವರು ಹೇಳಿದರು. ಸಹಾಯಕ ಪ್ರಾಧ್ಯಾಪಕ ಡಾ.ರೀತ್ ಕಮಲ್ ತಿವಾರಿ ಮಾತನಾಡಿ, “ತನಿಖೆಗಳಿಲ್ಲದೆ ನಾವು ಅದರ ಬಗ್ಗೆ ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಈ ಲೋಹ ಉದ್ಯಮದಿಂದ ಬಂದಿರಲು ಸಾಧ್ಯವಿಲ್ಲ.2020-21ರ ಕೇಂದ್ರ ಗಣಿ ಸಚಿವಾಲಯದ ವಾರ್ಷಿಕ ವರದಿಯು ಈ ಒಂದು ಲೋಹವನ್ನು “12 ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಲ್ಲಿ ಒಂದು” ಎಂದು ಗುರುತಿಸಿದೆ.ಶುದ್ಧ ರೂಪದಲ್ಲಿದ್ದಾಗ ಇದು ಟ್ಯಾಂಟಲಮ್ ಡಕ್ಟೈಲ್ ಆಗಿರುತ್ತದೆ, ಅಂದರೆ ಅದನ್ನು ವಿಸ್ತರಿಸಬಹುದು, ಎಳೆಯಬಹುದು ಅಥವಾ ತೆಳುವಾದ ತಂತಿ ಅಥವಾ ದಾರದ ರೂಪದಲ್ಲಿ ಎಳೆಯಬಹುದು.ಟ್ಯಾಂಟಲಮ್ ಪರಮಾಣು ಸಂಖ್ಯೆ 73 ಹೊಂದಿರುವ ಅಪರೂಪದ ಲೋಹವಾಗಿದೆ. ಹಾಗೆಯೇ ಇದು ಒಂದು ಗಟ್ಟಿಯಾದ, ಹೊಳಪುಳ್ಳ ಪರಿವರ್ತನೆಯ ಲೋಹವಾಗಿದ್ದು ಅದು ಹೆಚ್ಚು ತುಕ್ಕು ನಿರೋಧಕವಾಗಿದೆ.