ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಪ್ರತಿ ತಿಂಗಳು ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಪ್ರಾರಂಭಿಸಿದ್ದು, ಗುರುವಾರ ಎರಡನೇ ಮೇಳವು ಆಯೋಜನೆಗೊಂಡಿತ್ತು.
ಮೇಳದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನೂರಾರು ಉದ್ಯೋಗಾಕಾಂಕ್ಷಿಗಳು ನೇರ ಹಾಗೂ ಆನ್ ಲೈನ್ ಮೂಲಕ ಸಂದರ್ಶನಕ್ಕೆ ಹಾಜರಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಇಂಡಸ್ ಇಂಡ್ ಬ್ಯಾಂಕ್, ಮಣಿಪಾಲ್ ಟೆಕ್ನಾಲಜೀಸ್, ಹೆಚ್ ಡಿ ಎಫ್ ಸಿ ಲೈಫ್, ಡಿಜಿಟಲ್ ಸಾರಥಿ, ಪ್ರಕಾಶ್ ರೀಟೆಲ್ಸ್ ಪ್ರೈ ಲಿ, ಪುನರ್ ನವ ಇನ್ಶುರೆನ್ಸ್, ಉದಯ ಕಿಚನ್ಸ್, ಅವತಾರ್ ಹೋಟೆಲ್ಸ್, ಶಾಮ ಹೊಂಡ, ಮಹೇಂದ್ರ ಕರ್ನಾಟಕ ಏಜೆನ್ಸೀಸ್, ಭಾರತ ಆಟೋ ಕಾರ್ಸ್, ಬಿ ಎಸ್ ಎಲ್ ಇಂಡಿಯಾ, ಬ್ಲಾಕ್ ಅಂಡ್ ಗ್ರೇ, ಗಾಮಾ ಎಲೆಟ್ರಾನಿಕ್ಸ್, ಸಾರಾ ಇಂಟರ್ನೇಶನಲ್ಸ್, ಸಮನ್ವಯ ಹೋಟೆಲ್ಸ್, ಆಯಾಥಾನ ಗ್ರೂಪ್ ಹೀಗೆ 20ಕ್ಕೂ ಹೆಚ್ಚಿನ ಕಂಪೆನಿಗಳು ಭಾಗವಹಿಸಿದ್ದವು.
ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ “ನಮ್ಮ ಸಂಸ್ಥೆಯು ಈ ಮೇಳಗಳನ್ನು ಸಂಚಲನ ಟ್ರಸ್ಟ್ ನ ಸಹಕಾರದೊಂದಿಗೆ ಸಂಪೂರ್ಣ ಉಚಿತವಾಗಿ ಆಯೋಜಿಸುತ್ತಿದ್ದು, ಈ ಕಾರ್ಯಕ್ರಮವು ಈಗಾಗಲೇ ನೂರಾರು ಯುವಕ-ಯುವತಿಯರಿಗೆ ತಮ್ಮ ಭವಿಷ್ಯ ನಿರ್ಮಿಸಲು ಹಾಗೂ ಸ್ಥಳೀಯ ಮತ್ತು ಇನ್ನಿತರ ಪ್ರದೇಶಗಳ ಕಂಪೆನಿಗಳಿಗೆ ಉತ್ತಮ ಉದ್ಯೋಗಿಗಳನ್ನು ಒದಗಿಸುವ ವೇದಿಕೆಯಾಗಿ ಪರಿವರ್ತನೆಗೊಂಡಿದೆ” ಎಂದು ತಿಳಿಸಿದರು.ಮುಂದಿನ ಮೇಳಗಳಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಮತ್ತು ಉದ್ಯೋಗದಾತರು
www.unnathijobs.com ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ರಾಜೇಶ್, ದೀಪಿಕಾ, ಸ್ಮೃತಿ, ಛಾಯಾ, ಕಾರ್ತಿಕ್, ನಿತಿನ್ ಉಪಸ್ಥಿತರಿದ್ದರು.