ಉಡುಪಿ: ಅಕ್ಷಯಾಮೃತ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ದ್ವಿತೀಯ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಶ್ರೀಕಾಂತ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಬಾಲಕೃಷ್ಣ ನಾಯಕ್ ಹಾಗೂ ಕಲೆ ಸಾಹಿತ್ಯದ ಬಹುಮುಖ ಪ್ರತಿಭೆಯ ಕುಸುಮಾ ಕಾಮತ್ ಇವರನ್ನು ಸನ್ಮಾನಿಸಲಾಯಿತು. ಸಂಘಕ್ಕೆ ಸೇವೆ ಸಲ್ಲಿಸಿದ ರವೀಂದ್ರ ಪ್ರಭು ಕಡ್ತಲ, ಉಮೇಶ ನಾಯಕ್ ಶಿರ್ವ, ಸಂದೀಪ ನಾಯಕ್ ಪೆರ್ಣಂಕಿಲ, ಸದಾನಂದ ನಾಯಕ್ ಕಳತ್ತೂರು, ಇತರರಿಗೆ ಗೌರವಾರ್ಪಣೆ ಮಾಡಲಾಯಿತು.
2022-23 ಸಾಲಿನ ಆಯವ್ಯಯ, ಆಸ್ತಿ ಜವಾಬ್ದಾರಿ ವಿವರ 2023-24ನೇ ಸಾಲಿನ ಬಜೆಟ್ ಮಂಡಿಸಿದ ಸಿಇಓ ಶಶಿಕಾಂತ್ ಅಂಗೀಕಾರ ಪಡೆದರು.
ಉಪಾಧ್ಯಕ್ಷ ಗಿರೀಶ್ ಪ್ರಭು, ನಿರ್ದೇಶಕ ಜನಾರ್ಧನ ಆರ್ ನಾಯಕ್, ರಮಾನಂದ ಎಸ್ ಪ್ರಭು, ಪ್ರಕಾಶ್ ವಿ ನಾಯಕ್, ವಿಜಯಲಕ್ಷ್ಮೀ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಿರ್ದೇಶಕ ಸುದರ್ಶನ ಎಸ್. ಪ್ರಭು ನಿರೂಪಿಸಿ, ರವೀಂದ್ರ ಕುಮಾರ್ ಪ್ರಭು ಸ್ವಾಗತಿಸಿದರು. ನಿರ್ದೇಶಕ ಶಾಂತಾರಾಮ್ ಸಾಲ್ವಂಕರ್ ವಂದಿಸಿದರು. ಕುಸುಮಾ ಕಾಮತ್ ಇವರಿಂದ ಮಿಮಿಕ್ರಿ, ಸಂಗೀತ ಜರುಗಿತು.