ಪ್ರತಿಭಾ ಕುಳಾಯಿ ಮಾನಹಾನಿಕರ ಪೋಸ್ಟ್ ಪ್ರಕರಣ: ಎರಡನೇ ಆರೋಪಿ ನ್ಯಾಯಾಲಯಕ್ಕೆ ಹಾಜರ್

ಮಂಗಳೂರು: ಕಾಂಗ್ರೆಸ್ ನಾಯಕಿ, ಸಾಮಾಜಿಕ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ಪ್ರಕರಣದಲ್ಲಿ ಎರಡನೇ ಆರೋಪಿ ಅಡ್ಯಾರ್ ಪದವು ನಿವಾಸಿ ಕೆ.ಆರ್.ಶೆಟ್ಟಿ ಗುರುವಾರದಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ತನ್ನ ವಕೀಲರ ಜೊತೆ ನ್ಯಾಯಾಲಯಕ್ಕೆ ಹಾಜರಾಗಿರುವ ಆತನನ್ನು ನ್ಯಾಯಾಲಯವು ಒಂದು ದಿನದ ಮಟ್ಟಿಗೆ ಪೊಲೀಸ್ ವಶಕ್ಕೊಪ್ಪಿಸಿದೆ. ಶೆಟ್ಟಿ ಪೋಸ್ಟ್ ಮಾಡಿದ ಪೋಸ್ಟ್ ಗೆ ಶ್ಯಾಮ್ ಸುದರ್ಶನ್ ಭಟ್ ಎನ್ನುವವರು ಅಸಭ್ಯ ಟಿಪ್ಪಣಿಯನ್ನು ಬರೆದಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಆತನಿಗಾಗಿ ಶೋಧ ಮುಂದುವರಿಸಿದ್ದಾರೆ.