ಉಡುಪಿ: ಎಸ್ ಡಿಪಿಐ ಒಂದು ಉಗ್ರ ಸಂಘಟನೆಯಾಗಿದ್ದು, ದೇಶದಾದ್ಯಂತ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಪ್ರೇರೇಪಿಸುವುದು ಮತ್ತು ಅವರಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತಿದೆ. ಇದು ಈಗಾಗಲೇ ಹಲವಾರು ಘಟನೆಗಳಲ್ಲಿ ಬಹಿರಂಗಗೊಂಡಿದ್ದು, ಈಗ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ನಡೆದ ಗಲಭೆಯಲ್ಲಿ ಮತ್ತೆ ಸಾಬೀತಾಗಿದೆ. ಹಾಗಾಗಿ ಈ ಸಂಘಟನೆಯನ್ನು ಕೂಡಲೇ ದೇಶಾದ್ಯಂತ ನಿಷೇಧ ಮಾಡಬೇಕು ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಒತ್ತಾಯಿಸಿದ್ದಾರೆ.
ಹಾಗೆಯೇ ಎಸ್ ಡಿಪಿಐ ಸಂಘಟನೆ ಶೃಂಗೇರಿ ಶಂಕರಾಚಾರ್ಯರ ವೃತ್ತದ ಜಗದ್ಗುರು ಶಂಕರಾಚಾರ್ಯರ ಪ್ರತಿಮೆ ಮೇಲೆ ಉಗ್ರಸಂಘಟನೆಯ ಪತಾಕೆ ಹಾರಿಸಿ, ಪ್ರತಿಮೆಯನ್ನು ವಿರೂಪಗೊಳಿಸಿ ಧ್ವಂಸ ಮಾಡಿರುವುದನ್ನು ಶ್ರೀರಾಮಸೇನೆ ಖಂಡಿಸುತ್ತದೆ. ಈ ಬಗ್ಗೆ ತ್ವರಿತ ಹಾಗೂ ನ್ಯಾಯಯುತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ದುಷ್ಕೃತ್ಯ ನಡೆಸಿ ಹಿಂದೂಗಳ ಸಹನೆ ಮತ್ತು ತಾಳ್ಮೆಯನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.