ಎಸ್ಡಿಎಮ್ ಫಾರ್ಮಸಿ ಉಡುಪಿ ಸುಮಾರು ಆರು ದಶಕಕ್ಕೂ ಮಿಕ್ಕಿದ ಅನುಭವ, ಪರಿಶ್ರಮದಿಂದ ಕೂದಲಿನ ಸಮಸ್ಯೆಗಳಿಗೆ ಹಾಗೂ ಆರೋಗ್ಯಕ್ಕೆ ಮಾರ್ಗೋಪಾಯವನ್ನು ಕಂಡುಕೊಂಡಿದೆ. ಕೂದಲಿನ ಬೆಳವಣಿಗೆ ಉತ್ತೇಜಿಸುವುದು, ಆರೋಗ್ಯಕರ ಕೂದಲನ್ನು ಪಡೆಯಲು ಸಾಂಪ್ರದಾಯಿಕ ಆರೋಗ್ಯ ಸೂತ್ರಗಳನ್ನು ಅನುಸರಿಸಿ ‘ಮಂಜುಶ್ರೀ’ ಹೇರ್ ಆಯಿಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕೂದಲಿನ ರಕ್ಷಣೆ ಮತ್ತು ಪರಿಪೂರ್ಣ ಬೆಳವಣಿಗೆ ಇದರ ಪ್ರಧಾನ ಧ್ಯೇಯವಾಗಿದೆ.
ಈ ಪ್ರಕ್ರಿಯೆಯಲ್ಲಿ ಋಷಿಮುನಿ ಪ್ರಣೀತ ಸಾಂಪ್ರದಾಯಿಕ ಸೂತ್ರವನ್ನು ಅಚ್ಚುಕಟ್ಟಾಗಿ ಅನುಸರಿಸಿ ಶಾಸ್ತ್ರೀಯ ತೈಲಪಾಕ, ಕಚ್ಚಾ ವಸ್ತುಗಳ ಸಂಸ್ಕರಣೆ ಹಾಗೂ ಆಧುನಿಕ ತಂತ್ರಜ್ಞಾನಗಳ ಜೊತೆಗೆ ತಯಾರಿಕಾ ವಿಧಿಯಲ್ಲಿ ಉನ್ನತ ಮಟ್ಟದ ತಂತ್ರಗಾರಿಕೆಯಿಂದ ಔಷಧಿಯನ್ನು ತಯಾರಿಸಲಾಗುತ್ತದೆ. ಈ ಔಷಧಿಯ ಮುಖ್ಯ ಗುರಿ ಕೂದಲಿನ ರಕ್ಷಣೆ ಹಾಗೂ ಕೂದಲಿಗೆ ಪೌಷ್ಠಿಕಾಂಶವನ್ನು ನೀಡಿ ಕೂದಲನ್ನು ಪುನರ್ಯೌವನಗೊಳಿಸುವುದು.
ಇದರಲ್ಲಿ ಬಳಸುವ ಕಚ್ಚಾ ಮೂಲಿಕೆಗಳಾದ ನೆಲ್ಲಿಕಾಯಿಯಲ್ಲಿರುವ ‘ವಿಟಮಿನ್-ಸಿ’ಯ ಶ್ರೀಮಂತಿಕೆಯಿಂದಾಗಿ ತಲೆಯಲ್ಲಿರುವ ಹೊಟ್ಟಿನ ಸಮಸ್ಯೆಯ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದ್ದು ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಬಿಲ್ವ, ಅಮೃತ, ಶುಂಠಿ-ಈ ಸಂಯೋಜನೆಯಿಂದ ತಲೆಯ ಮೇಲೆ ಯಾವುದೇ ಅತಿಯಾದ ಶೀತ ಪರಿಣಾಮ ತಡೆಯುತ್ತದೆ. ವಿಡಂಗ, ಕೃಷ್ಣಜೀರಕ ಇವು ತಲೆಹೊಟ್ಟು, ತುರಿಕೆ, ಶಿಲೀಂದ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನ್ಯಗ್ರೋಧ, ಶತಾವರಿ, ಹಾಲು ಇದು ಕೂದಲಿನ ಬೆಳವಣಿಯ ಕಾರ್ಯನಿರ್ವಹಿಸುತ್ತದೆ. ತ್ರಿಫಲ ಕೂದಲಿನ ಕಿರುಚೀಲಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕಾರಿ. ತೆಂಗಿನೆಣ್ಣೆಯು ಚರ್ಮದ ಹೊಳಪು ಮತ್ತು ಮೃದುಗೊಳಿಸುವಿಕೆಗೆ ಅತ್ಯುತ್ತಮವಾಗಿದೆ.
ಹೀಗೆ ಈ ‘ಮಂಜುಶ್ರೀ’ ಕೇಶ ತೈಲವು ವಿವಿಧ ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಇದರಲ್ಲಿನ ಹೇರಳವಾದ ಪ್ರೋಟೀನ್ ಹಾಗೂ ಷೋಷಕಾಂಶಗಳ ಕೊರತೆಗಳನ್ನು ಮರುಪೂರಣಗೊಳಿಸುವುದರಿಂದ ಆರೋಗ್ಯವಾದ ಹಾಗೂ ಬಲವಾದ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ.
ಇದರ ಪ್ರಯೋಜನವನ್ನು ಉತ್ತಮವಾಗಿ ಪಡೆಯಲು ದಿನಾಲೂ ‘ಮಂಜುಶ್ರೀ’ ಎಣ್ಣೆಯನ್ನು ಬಳಸಲು ಸೂಚಿಸಲಾಗುತ್ತದೆ. ಕೂದಲಿನ ಬುಡಕ್ಕೆ ಬೆರಳ ತುದಿಗಳಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಕೂದಲಿನ ಬುಡಗಳು ಬಲಗೊಳ್ಳುತ್ತವೆ. ಈ ಎಣ್ಣೆಯನ್ನು ದಿನವಿಡಿ ಕೂದಲಿನಲ್ಲಿರಿಸಿ ಮತ್ತೆ ಸೌಮ್ಯವಾದ ಸಾಬೂನು ಅಥವಾ ಶ್ಯಾಂಪೂ ಬಳಸಿ ಸ್ನಾನ ಮಾಡುವುದರಿಂದ ಉತ್ತಮ ಪರಿಣಾಮ ಸಿಗುತ್ತದೆ ಎಂದು ಫಾರ್ಮಸಿಯ ಮುಖ್ಯ ಪ್ರಬಂಧಕ ಡಾ. ಮುರಳೀಧರ ಆರ್ ಬಲ್ಲಾಳ್ ತಿಳಿಸಿರುತ್ತಾರೆ. ಭಾರತದಾದ್ಯಂತ ಈ ಔಷಧಿಯು ಆಯುರ್ವೇದ, ಮೆಡಿಕಲ್ಗಳಲ್ಲಿ ಲಭ್ಯವಿದೆ ಅಲ್ಲದೆ ಸಂಸ್ಥೆಯ ವೆಬ್ ಸೈಟ್ ನಲ್ಲಿ ಆನ್ಲೈನ್ನಲ್ಲಿ ಆರ್ಡರ್ನ್ನು ಮಾಡಿ ಪಡೆಯಬಹುದು ಎಂದಿದ್ದಾರೆ.