ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವಿಜ್ಞಾನಿಗಳಿಂದ ಕ್ಷೇತ್ರ ಭೇಟಿ

ಉಡುಪಿ : ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಬಿ. ಧನಂಜಯ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಚೈತನ್ಯ ಹೆಚ್. ಎಸ್, ತೋಟಗಾರಿಕೆ ತಜ್ಞರು, ಡಾ. ಸಚಿನ್ ಯು. ಎಸ್, ಕೀಟಶಾಸ್ತ್ರ ತಜ್ಞರು ಸೇರಿದ ತಂಡವು  ಅರುಣ್ ಡಿ. ಸಿಲ್ವ, ಪ್ರಗತಿಪರ ಕೃಷಿಕರು ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರ ಅಡಿಕೆ ತೋಟಕ್ಕೆ ಇತ್ತೀಚೆಗೆ ಬೇಟಿ ನೀಡಿದರು.

ಅಡಿಕೆ ಗಿಡಗಳನ್ನು ವಿಜ್ಞಾನಿಗಳ ತಂಡ ಗಮನಿಸಿದಾಗ, ಅಡಿಕೆ ಗರಿಗಳಿಗೆ ಎಲೆ ನುಸಿ ಬಾದೆ ಕಂಡುಬಂದಿದ್ದು, ಇದರ ಹತೋಟಿಗೆ ಕೀಟದಿಂದ ಹಾಳಾದ  ಭಾಗವನ್ನು ಕತ್ತರಿಸಿ ಸುಡಲು ಸೂಚಿಸಲಾಯಿತು. ಹಾಗೆಯೇ  (ವೆಟ್ಟಬಲ್ ಸಲ್ಪರ್) ನೀರಿನಲ್ಲಿ ಕರಗುವ ಗಂಧಕದ ಪುಡಿಯನ್ನು ಪ್ರತಿ ಲೀಟರ್ ನೀರಿಗೆ 4 ಗ್ರಾಂ ರಂತೆ ಸೇರಿಸಿ ಅಡಿಕೆ ಗರಿಗಳಿಗೆ ಸಿಂಪಡಿಸಲು ಸೂಚಿಸಲಾಯಿತು.

ಅರುಣ್ ಡಿ ಸಿಲ್ವರವರ ಇತರೆ ಕೃಷಿಗಳನ್ನು ವಿಕ್ಷೀಸಿದಾಗ ಅವರು ನಿರ್ಮಿಸಿದ ಕತ್ತಾಳೆ ಜೀವಂತ ಬೇಲಿ, ಆಧುನಿಕ ಕಾಪೋಸ್ಟ್ ವಿಧಾನ, ಕೃಷಿ ಹೊಂಡ ಮತ್ತು ಅದರಿಂದ ಕೊಳವೆ ಬಾವಿ ಮರುಪೂರ್ಣ ಮತ್ತು ಕೃಷಿ ಹೊಂಡದಲ್ಲಿ ಬಿಳಿ ಮುಗುಡು ಮೀನು ಸಾಕಾಣೆ ಹಾಗೂ ಅವರು ಮೀನುಗಳನ್ನು ಸಸ್ಯಹಾರಿ ಆಹಾರ ಕೊಟ್ಟು ಸಾಕಾತ್ತಿರುವ ಪದ್ದತಿ, ಬಯೋ ಡೈಜೆಸ್ಟರ್ ಸ್ಲರಿಯ ಉಪಯೋಗ, ಪೈಟರ್ ಮತ್ತು ಸ್ಥಳೀಯ, ಕೋಳಿ ಸಾಕಣೆ, ಹೈನುಗಾರಿಕೆ ಹಾಗೂ ಪ್ರಾಚೀನ ಕಾಲದ ಕೃಷಿ ಸಲಕರಣೆಗಳ ಸಂಗ್ರಹ ಹೀಗೆ ಹತ್ತು ಹಲವು ಕೃಷಿಗಳನ್ನು ವಿಜ್ಞಾನಿಗಳ ತಂಡ ವೀಕ್ಷೀಸಿ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ಅರುಣ್ ಡಿ. ಸಿಲ್ವ, ಅವರು ಎಲೆಮರಿಯ ಕಾಯಿಯಂತೆ ಆಧುನಿಕ ಕೃಷಿಗಳನ್ನು ಅಳವಡಿಸಿಕೊಂಡು ಸಾಣೂರು ಗ್ರಾಮದಲ್ಲಿ ಮೌನ ಕಾಂತಿಯನ್ನೆ ಮಾಡಿರುತ್ತಾರೆ. ಅನೇಕ ವರ್ಷಗಳಿಂದ ಕೃಷಿ ವಿಜ್ಞಾನ ಕೇಂದ್ರದ, ಬ್ರಹ್ಮಾವರದ ನಿಕಟ ಸಂಪರ್ಕವನ್ನು ಹೊಂದಿದ್ದು ಕೇಂದ್ರದ ಹಲವು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಧುನಿಕ ಕೃಷಿಯ ಮಾಹಿತಿಯನ್ನು ಪಡೆದು ತಮ್ಮ ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡಿದ್ದು ಇತರರಿಗೆ ಮಾದರಿಯಾಗಿರುತ್ತಾರೆ. ಇವರ ಚಿಕ್ಕ ಚಲನಚಿತ್ರವನ್ನು ತಯಾರಿಸಿ ಕೆವಿಕೆ ಉಡುಪಿಯ ಫೇಸ್‌ಬುಕ್ ಪುಠದಲ್ಲಿ ಇದನ್ನು ವೀಕ್ಷೀಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಮುಖ್ಯಸ್ಥರಾದ ಡಾ.ಬಿ ಧನಂಜಯ ತಿಳಿಸಿದರು.

ರವಿ , ತೆಳ್ಳಾರು ಗ್ರಾಮ ಕಾರ್ಕಳ ತಾಲೂಕು ಇವರ ಅಣಬೆ ಸಾಕಾಣೆ ಘಟಕಕ್ಕೆ ಬ್ರಹ್ಮಾವರದ ಕೃಷಿ ವಿಜ್ಞಾನಿಗಳ ತಂಡವು ಇದೇ ಸಂದರ್ಭದಲ್ಲಿ ಬೇಟಿ ನೀಡಿ ಅವರು ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಬೆಳೆ ಅತ್ಯುತ್ತಮವಾಗಿ ಬರುತ್ತಿರುವುದರ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸುತ್ತಾ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಮತ್ತು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು ನೀಡಿದ ತರಬೇತಿ ಪ್ರಸ್ತುತ ನನ್ನ ಬೆಳೆಯಲ್ಲಿ ಉತ್ತಮ ಪರಿಣಾಮಗಳನ್ನು ಮತ್ತು ಹೆಚ್ಚು ಇಳುವರಿಯನ್ನು ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.