ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ತಿರುವಿನಲ್ಲಿ ಕಾರು ಮತ್ತು ಶಾಲಾ ವಿದ್ಯಾರ್ಥಿಗಳ ಪ್ರವಾಸದ ಬಸ್ ನಡುವೆ ಶುಕ್ರವಾರ ಅಪಘಾತ ಸಂಭವಿಸಿದ್ದು, ಘಟನೆಯಿಂದಾಗಿ ಬಸ್ಸಿನಲ್ಲಿದ್ದ ಎಂಟು ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ ಗಾಯಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಹಿರಿಯ ಪ್ರಾಥಮಿಕ ಶಾಲೆಯಿಂದ 3 ಬಸ್ಸುಗಳಲ್ಲಿ ಪ್ರವಾಸಕ್ಕೆ ಬಂದಿದ್ದರು. ಈ ಪೈಕಿ ಒಂದು ಬಸ್ ಧರ್ಮಸ್ಥಳದಿಂದ ಬೇಲೂರಿಗೆ ಹೋಗುವ ವೇಳೆ ಕೊಕ್ಕಡದ ಕಾಪಿನಬಾಗಿಲು ಬಳಿ ಕಾರೊಂದಕ್ಕೆ ಢಿಕ್ಕಿಯಾಗಿ ಉರುಳಿಬಿದ್ದಿದೆ. ಇದರಿಂದ ಗಾಯಗೊಂಡ ಎಂಟು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಆಸ್ಪತ್ರೆಗ ದಾಖಲಾಗಿಸಲಾಗಿದೆ.
ಅಪಘಾತಕ್ಕೀಡಾದ ಕಾರು ತಮಿಳುನಾಡಿನ ಚಿತ್ತೂರು ಜಿಲ್ಲೆಯಿಂದ ಬಂದಿದ್ದು, ಅದರ ಚಾಲಕ ಪ್ರಸಾದ್ (38) ಎಂಬವರು ಗಾಯಗೊಂಡಿದ್ದಾರೆ. ಬಸ್ ಉರುಳಿ ಕಾರಿನ ಮುಂಭಾಗದ ಮೇಲೆ ಬಿದ್ದಿದೆ. ಆದರೆ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.