ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಇದರ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹದಿನೈದನೇ ವರ್ಷದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಿ.ಶಂಕರ್ ವಹಿಸಿದ್ದರು. ರತ್ನಕುಮಾರ್, ಆನಂದ್ ಸಿ.ಕುಂದರ್,ಪ್ರಮೋದ್ ಮಧ್ವರಾಜ್,ಮಹಾಲಿಂಗೇಶ್ವರ ಕೆ.,ಸುಜಿತ್ ಕುಮಾರ್, ಡಾ.ತಲ್ಲೂರ್ ಶಿವರಾಮ ಶೆಟ್ಟಿ, ವಿ.ಜಿ.ಶೆಟ್ಟಿ, ಭುವನೇಂದ್ರ ಕಿದಿಯೂರ್, ಪಿ.ಪುರುಷೋತ್ತಮ ಪಟೇಲ್, ಡಾ.ಹರಿಶ್ಚಂದ್ರ, ಹರಿಯಪ್ಪ ಕೋಟಿಯನ್, ವಿಶ್ವನಾಥ ಶೆಣೈ, ಆನಂದ ಪಿ. ಸುವರ್ಣ, ಯಕ್ಷಗಾನ ಕಲಾರಂಗ ಇದರ ಅಧ್ಯಕ್ಷರಾದ ಶ್ರೀ ಗಣೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣೆಯನ್ನು ಮಾಡಲಾಯಿತು