ಉಡುಪಿ: ಭಾರತದ ಅವಿಭಾಜ್ಯ ಅಂಗ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಅಲ್ಲಿನ ನಾಗರಿಕರ ಬದುಕಿಗೆ ಸುರಕ್ಷತೆ ಒದಗಿಸುವ 370 ನೇ ವಿಧಿ ರದ್ದತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕೈಗೊಂಡ ಐತಿಹಾಸಿಕ ನಿರ್ಣಯವನ್ನು ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠವು ಎತ್ತಿ ಹಿಡಿದಿರುವುದು ಸತ್ಯಕ್ಕೆ ಸಂದ ಜಯ ಎಂದು ಉಡುಪಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ದಾವೂದ್ ಅಬೂಬಕ್ಕರ್ ಹೇಳಿದ್ದಾರೆ.
ಉನ್ನತ ನ್ಯಾಯಾಲಯದ ತೀರ್ಪು ಸತ್ಯಕ್ಕೆ ಸಂದ ಜಯ, ನ್ಯಾಯ ಸಮ್ಮತ ತೀರ್ಪಿನಿಂದ ದೇಶದ ಏಕತೆ ಮತ್ತು ಅಖಂಡತೆಗೆ ಸವಾಲು ಒಡ್ಡಿದ್ದ ವಿಭಜನಕಾರಿ ಕಾಂಗ್ರೆಸ್ಸಿಗೆ ತಾನು ಮಾಡಿದ ತುಷ್ಟೀಕರಣ ನೀತಿ ಈಗ ಮಗ್ಗುಲ ಮುಳ್ಳಾಗಿದೆ ಎಂದು ಅಬೂಬಕ್ಕರ್ ತಿಳಿಸಿದ್ದಾರೆ.












