ಉಡುಪಿ:ಸೀನಿಯರ್ ಛೇಂಬರ್‌ನಿಂದ ಹೂಡೆ ಕಡಲ ಕಿನಾರೆಯಲ್ಲಿ ಮೂರು ಜೀವ ಉಳಿಸಿದ ರಾಜೇಶ್ ಗುಜ್ಜರ್‌ಬೆಟ್ಟುರವರಿಗೆ ಸನ್ಮಾನ


ಉಡುಪಿ:ಹೂಡೆಯ ರುದ್ರ ರಮಣೀಯ ಕಡಲ ಕಿನಾರೆಯಲ್ಲಿ ವಿಹರಿಸಲು ಆಗಮಿಸಿದ ಬೆಳಗಾವಿ ಮೂಲದ ಮೂವರು ಯುವಕರು ಸಮುದ್ರದ ಸೆಳೆತಕ್ಕೆ ಸಿಕ್ಕಿ ಸಮುದ್ರದ ಮಧ್ಯೆ ಜೀವನ್ಮರಣ ಸ್ಥಿತಿಯಲ್ಲಿದ್ದು ಅದನ್ನು ಗಮನಿಸಿದ ಮೀನುಗಾರಿಕೆ ವೃತ್ತಿಯ ರಾಜೇಶ್ ಗುಜ್ಜರ್‌ಬೆಟ್ಟು ಕಡಲಬ್ಬರದ ನಡುವೆ ತನ್ನ ಜೀವದ ಹಂಗು ತೊರೆದು ಮೂವರನ್ನು ಕಿನಾರೆಗೆ ಎಳೆದು ತಂದು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಮಾನವೀಯ ಕಾರ್ಯಕ್ಕಾಗಿ ನೇಜಾರು ಮೈದಾನದಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಹಾಗೂ ನೇಜಾರು ಲೀಜನ್ ಕಾರ್ಯಕ್ರಮದಲ್ಲಿ ಮಲ್ಪೆಯ ಠಾಣಾಧಿಕಾರಿ ಅನಿಲ್‌ರವರು ಸನ್ಮಾನಿಸಿ ಶುಭ ಹಾರೈಸಿ ಯುವಕ ಇಂತಹ ಶ್ಲಾಘನೀಯ ಕೆಲಸದ ಮೂಲಕ ಸಮಾಜಕ್ಕೆ ಸ್ಪೂರ್ತಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಛೇಂಬರ್ ಉಡುಪಿ ಟೆಂಪಲ್ ಸಿಟಿ ಅಧ್ಯಕ್ಷ ಶಿವಾನಂದ ಶೆಟ್ಟಿಗಾರ್ ವಹಿಸಿ ಸ್ವಾಗತಿಸಿದರು. ನೇಜಾರು ಲೀಜನ್ ಅಧ್ಯಕ್ಷ ಸುರೇಶ್ ಅಮೀನ್, ರೋಟರ‍್ಯಾಕ್ಟ್ ಬ್ರಹ್ಮಾವರದ ಅಧ್ಯಕ್ಷ ಆಶೀಶ್ ಅಂದ್ರಾದೆ, ಮುಖ್ಯ ಅತಿಥಿ ಸೀನಿಯರ್ ಛೇಂಬರ್‌ನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್, ರಾಷ್ಟ್ರೀಯ ಅಧಿಕಾರಿ ಜಗದೀಶ್ ಕೆಮ್ಮಣ್ಣು, ಪೂರ್ವಾಧ್ಯಕ್ಷರಾದ ವಿಜಯ ಕುಮಾರ್ ಉದ್ಯಾವರ, ಉಮೇಶ್ ಅಮೀನ್, ಪ್ರಶಾಂತ್ ಆಚಾರ್, ಸೀನಿಯರೇಟ್ ಅಧ್ಯಕ್ಷೆ ರೋಹಿಣಿ ಉಮೇಶ್, ಕಾರ್ಯಕ್ರಮದ ನಿರ್ದೇಶಕರಾದ ಸುಶೀಲ್ ಬೋಳಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಜಿ. ಸುಕುಮಾರ್ ಹಾಗೂ ನಿತ್ಯಾನಂದ ನೇಜಾರು ಕಾರ್ಯಕ್ರಮ ನಿರೂಪಿಸಿದರು.