ನದಿಯ ಬಳಿ ಸೋಪು, ಡಿಟರ್ಜೆಂಟ್‌ ಮತ್ತು ಶ್ಯಾಂಪೂ ಮಾರಾಟ ನಿಷಿದ್ಧ: ರಾಜ್ಯ ಸರಕಾರ ಮಹತ್ವದ ಆದೇಶ, ಇನ್ನಾದರೂ ಜಲ ಮಾಲಿನ್ಯ ಕಡಿಮೆಮಾಡೋಣ, ನಮ್ಮ ನೀರನ್ನು ಸಂರಕ್ಷಿಸೋಣ

ಬೇಸಿಗೆಯಲ್ಲಿ ನೀರೇ ಇಲ್ಲದೇ ಹಾಹಾಕಾರ ಎನ್ನುವ ಸುದ್ದಿಗಳು ಮತ್ತೆ ಮತ್ತೆ ಕೇಳುತ್ತಲೇ ಇದೆ. ಈ ಸಲದ ಬೇಸಿಗೆಯಂತೂ ಜಲ ಮೂಲಗಳನ್ನು ನಾವೇ ಹಾಳು ಮಾಡಿದ್ದರ ಪರಿಣಾಮವಾಗಿ ನದಿ ಕೆರೆ ನೀರು ಹಾನಿಕಾರಕವಾಗಿ ಕುಡಿಯಲು ಅಯೋಗ್ಯವಾಗಿದೆ. ಇಂತದ್ದೇ ಹೊತ್ತಲ್ಲಿ ಸರಕಾರ ಪರಿಣಾಮಕಾರಿಯಾದ ಆದೇಶ ಹೊರಡಿಸಿದೆ. ಇದು ಜಾರಿಯಾದಲ್ಲಿ ಜಲಮೂಲವನ್ನು ಸಂರಕ್ಷಿಸಬಹುದು.

ಕಲುಷಿತಗೊಳ್ಳುವ ಜಲಮೂಲ, ನೈಸರ್ಗಿಕ ಸಂಪತ್ತಾದ ನದಿಯ ಬಳಿ ಬಳಿ ಸೋಪು, ಡಿಟರ್ಜೆಂಟ್‌ ಮತ್ತು ಶ್ಯಾಂಪೂ ಮಾರಾಟ ನಿಷಿದ್ಧಮಾಡುವ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ. ಇದು ಆದೇಶ ಮಾಡಿದ ದಿನದಿಂದಲೇ ಜಾರಿಗೆ ಬಂದಿದೆ. ಈ ಆದೇಶದ ಪ್ರಕಾರ

ನದಿಗಳು, ನೀರಿನ ಮೂಲಗಳನ್ನು ಸೋಪುಗಳು, ಡಿಟರ್ಜೆಂಟ್‌ಗಳು ಮತ್ತು ಶ್ಯಾಂಪೂಗಳಿಂದ ಉಂಟಾಗುವ ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನ ಇದಾಗಿದೆ. ವಿಶೇಷವಾಗಿ ಯಾತ್ರಾ ಕೇಂದ್ರಗಳ ಸುತ್ತಲೂ, ಜಲಮೂಲಗಳಿಂದ 500 ಮೀಟರ್ ದೂರದಲ್ಲಿ ಈ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇದೊಂದು ಮಹತ್ವದ ನಿರ್ಧಾರ ವಾಗಿದ್ದು ಪರಿಣಾಮಕಾರಿಯಾಗಿ ಅನುಷ್ಠಾನಗೊಂದರೆ ಖಂಡಿತ ಜಲಮಾಲಿನ್ಯ ತಡೆಗಟ್ಟಬಹುದು. ಸಾಬೂನಿನಲ್ಲಿರುವ ಹಾನಿಕಾರಕ ಅಂಶಗಳಿಂದ ಜಲಚರಗಳಿಗೂ ಕುತ್ತು ಬಂದಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆದೇಶ ಪರಿಣಾಮಕಾರಿ

ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ನದಿಗಳ ಪಕ್ಕದಲ್ಲಿ ಮತ್ತು ದೇವಾಲಯದ ಕೊಳಗಳ ಬಳಿ ಸೋಪುಗಳು ಮತ್ತು ಶ್ಯಾಂಪೂಗಳ ಮಾರಾಟವನ್ನು ನಿಯಂತ್ರಿಸಲು ಮತ್ತು ಭಕ್ತರು ತಮ್ಮ ಹಳೆಯ ಬಟ್ಟೆಗಳನ್ನು ಈ ಜಲಮೂಲಗಳಲ್ಲಿ ಬಿಡದಂತೆ ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನೀವೂ ಇದನ್ನು ಪಾಲಿಸಿ:

  • ಯಾವುದೇ ನದಿಯಾಗಿರಲಿ, ಜಲಮೂಲವಾಗಿರಲಿ ಅಲ್ಲಿ ಪ್ಲಾಸ್ಟಿಕ್ ಕಸ ಸೇರಿದಂತೆ ರಾಸಾಯನಿಕ ವಸ್ತುಗಳನ್ನು ಎಸೆಯುವುದಿಲ್ಲ ಎಂದು ಸಂಕಲ್ಪ ಮಾಡಿ
  • ನದಿಯಲ್ಲಿ ಸ್ನಾನ ಮಾಡಿ ಆದರೆ ಯಾವ ಕಾರಣಕ್ಕೂ ನದಿಯನ್ನು ಹಾನಿ ಮಾಡುವ ಹಕ್ಕು ನಮಗಿಲ್ಲ ಹಾಗಾಗಿ ಜಲಮೂಲವನ್ನು ಹಾಳು ಮಾಡಬೇಡಿ
  • ಮಕ್ಕಳಿಗೂ ನದಿ, ಜಲ ಸಂರಕ್ಷಣೆಯ ಕುರಿತು ಕಾಳಜಿ ಮೂಡಿಸಿ