ಮಂಡ್ಯ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪೋಸ್ಟರಿನಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಚಿತ್ರವನ್ನು ಹಾಕಲಾಗಿದ್ದು, ಕಾಂಗ್ರೆಸ್ ಪಕ್ಷವು ಇದು ಯಾರೋ ದುಷ್ಕರ್ಮಿಗಳ ಕೃತ್ಯ ಎಂದು ಆರೋಪಿಸಿದೆ. ಈ ಹಿಂದೆ ಕೇರಳದಲ್ಲಿಯೂ ಸಾವರ್ಕರ್ ಅವರ ಚಿತ್ರವನ್ನು ಹೊಂದಿರುವ ಪೋಸ್ಟರ್ ಒಂದನ್ನು ಹಾಕಲಾಗಿತ್ತು. ಇದೀಗ ಮಂಡ್ಯದಲ್ಲಿ ರಾಹುಲ್ ಗಾಂಧಿ ಇರುವ ಪೋಸ್ಟರಿನಲ್ಲಿ ಮತ್ತೆ ಸಾವರ್ಕರ್ ಭಾವಚಿತ್ರ ಹಾಕಲಾಗಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.