ಬಿಜೂರು: ಶ್ರೀ ಸಾಯಿ ಮಂದಿರದಲ್ಲಿ ಸೌರಮಾನ ಯುಗಾದಿ ವಿಶೇಷ ಕಾರ್ಯಕ್ರಮ

ಬಿಜೂರು: ಎ. 14 ರಂದು ಬಿಜೂರು ಗ್ರಾಮದ ಬವಳಾಡಿ ಶ್ರೀ ಸತ್ಯಸಾಯಿ ಮಂದಿರದಲ್ಲಿ ಸೂರ್ಯಸಿದ್ಧಾಂತ ಫೌಂಡೇಶನ್ ಪಂಚಾಂಗ ಮಂದಿರ ಮೊಗೇರಿ ಇವರಿಂದ ಕ್ರೋಧಿನಾಮ ಸಂವತ್ಸರದ ಸೌರಯುಗಾದಿ ವಿಶೇಷ ಕಾರ್ಯಕ್ರಮ ಜರಗಿತು.

ಪೂರ್ವಾಹ್ನ 7.30 ಕ್ಕೆ ಗೋಪೂಜೆ, 8.00 ಗಂಟೆಗೆ ಶ್ರೀ ಸತ್ಯಸಾಯಿ ಭಜನಾಮಂಡಳಿ ಬವಳಾಡಿ, ಶ್ರೀ ಶಂಕರನಾರಾಯಣ ಬಾಲ ಭಜನಾ ಮಂಡಳಿ ಮೊಗೇರಿ ಇವರಿಂದ ಭಜನ್’ಸಂಕೀರ್ತನೆ, ಸಂಜೆ 3.30 ಕ್ಕೆ ಜೋತಿಷ್ಯ ವಿದ್ವಾನ್ ವೇದಮೂರ್ತಿ ಡಾ.ಭರತ್ ಐತಾಳ್ ಉಳ್ಳೂರು ಇವರಿಂದ ಪಂಚಾಂಗ ಪಠಣ “ಸಮುದಾಯ ಫಲ ನಿರೂಪಣಮ್” ನಂತರ ಶ್ರೀ ವೆಂಕಟರಮಣ ಭಜನಾ ಮಂಡಳಿ ನಾಯ್ಕನಕಟ್ಟೆ, ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿ ಉಪ್ಪುಂದ ಇವರಿಂದ ಭಜನ್’ಸಂಕೀರ್ತನೆ “ಭಕ್ತಿ ಸುಧೆ” ನಡೆಯಿತು.

ಡಾ.ರಾಜಾರಾಮ ಹೆಬ್ಬಾರ್ ಸಹೋದರರು ಬವಳಾಡಿ ಇವರ ಸಹಕಾರದಿಂದ ನಡೆಯವ ಈ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದರು.

ಕಾರ್ಯಕ್ರಮದ ಸಂಘಟಕರಾದ ಜನಾರ್ದನ ಅಡಿಗ, ಅನುಪಮ ಜನಾರ್ದನ ಅಡಿಗ ದಂಪತಿಗಳು ಸೂರ್ಯ ಸಿದ್ದಾಂತ ಫೌಂಡೇಶನ್ ಪಂಚಾಂಗ ಮಂದಿರ ಮೊಗೇರಿ ಇವರು ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು.