ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ಸಹಿತ ಸತ್ಯನಾರಾಯಣ ವ್ರತಕಥ ಪೂಜೆಯ ಉದ್ಯಾಪನ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಭಕ್ತರ ಸಮಕ್ಷಮದಲ್ಲಿ ನಿರಂತರ ಅನ್ನ ಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಏಪ್ರಿಲ್ 6 ರಂದು ಹುಣ್ಣಿಮೆಯ ಪರ್ವಕಾಲದಲ್ಲಿ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ವಿಶೇಷ ಗುರುಪೂಜೆ ಸಲ್ಲಿಸಿ ಆದ್ಯ ಗಣಪತಿಯಾಗ, ಉದ್ಯಾಪನ ಮಹಾಯಾಗ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿತು.
49 ಕಲಶ ದಾನ, ಬ್ರಾಹ್ಮಣ ಆರಾಧನೆ, ಬ್ರಹ್ಮಚಾರಿ ಆರಾಧನೆ, ಬ್ರಾಹ್ಮಣ ಆರಾಧನೆ, ಆಚಾರ್ಯ ಪೂಜೆ, ಕುಮಾರಿ ಕುಮಾರ ಪೂಜೆ ನೆರವೇರಿತು.
ಅಷ್ಟಾವದನ ಸೇವೆಯನ್ನು ಅರವಿಂದ ಹೆಬ್ಬಾರ್ ಶ್ರೀಮತಿ ಚಂದ್ರಕಲಾ ಶ್ರೀಶ ಭಟ್ ಶಿವಕುಮಾರ್ ಬರಿತಾಯ ನಾಗರಾಜ ಭಟ್ ನೆರವೇರಿಸಿದರು.
ತರಂಗಿಣಿ ಭಜನಾ ಮಂಡಳಿಯವರಿಂದ ಭಜನೆ ಸಂಕೀರ್ತನೆ, ಮುರಳೀಧರ ಮುದ್ರಾಡಿ ತಂಡದವರಿಂದ ವಾದ್ಯಗೋಷ್ಠಿ ಹಾಗೂ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಶ್ರೀಮತಿ ಅಮೃತ ಆಶ್ಲೇಶ್, ಕುಮಾರಿ ಧನಶ್ರೀ,
ಭ್ರಮರಿ ತಂಡದ ಕುಮಾರಿ ಭ್ರಾಮರಿ, ಭವಾನಿ ಶಂಕರ್ ಇಶಾನ್ ಕುಮಾರ್ ಅವರಿಂದ ಸಮರ್ಪಿಸಲ್ಪಟ್ಟಿತು.
ಗತಕಾಲದ ಕ್ಷೇತ್ರ ಪರಂಪರೆಯನ್ನು ಮತ್ತೆ ಮತ್ತೆ ಮರು ಕಳಿಸುವಂತೆ ಈ ಮಹಾನ್ ಪೂಜಾ ಮಹೋತ್ಸವವನ್ನು ಆಚರಿಸಿ ನಿರಂತರತೆಯನ್ನು ಕಾಯ್ದುಕೊಂಡಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದರು.