ಸಾಣೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಪರಂಪರಾಗತ ಕೃಷಿ ವಿಕಾಸ ಯೋಜನೆ ಸಾಣೂರು ಮತ್ತು ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ಸಾಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಳೆ ನೀರು ಕೊಯ್ಲು ಅಭಿಯಾನ ಮತ್ತು ಮಾಹಿತಿ ಕಾರ್ಯಾಗಾರವು ಸಾಣೂರು ಯುವಕ ಮಂಡಲದ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ವಿಲ್ಫ್ರೇಡ್ ಡಿ ಸೋಜಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಯೋಜನೆಯ ಮುಂದುವರಿದ ಕಾರ್ಯಕ್ರಮ ಮಳೆ ಕೊಯ್ಲು ಯೋಜನೆ. ಈ ಕಾರ್ಯಕ್ರಮ ಇಂದು ಅತಿ ಅಗತ್ಯವಾಗಿದ್ದು, ಮುಂದಿನ ಜನಾಂಗಕ್ಕೆ ಜಲ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಜ್ಞಾನದೇವ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಬಿ., ಕೆ.ಎಂ.ಎಫ್ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಲ ಮರುಪೂರಣ ತಜ್ಞ ಜೋಸೆಫ್ ರೆಬೆಲ್ಲೋ ಪ್ರಾತ್ಯಕ್ಷಿಕೆ ಮೂಲಕ ಮಳೆ ನೀರು ಕೊಯ್ಲು ಮಾಹಿತಿ ನೀಡಿದರು.
ಸಾಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಂಡಲದ ರಾಮದಾಸ್ ಭಟ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸಚಿನ್ ಯು.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಂಡಲದ ಮಾಜಿ ಅಧ್ಯಕ್ಷರುಗಳಾದ ಮಹೇಶ್ ಕುಮಾರ್, ದೇವಾನಂದ್ ಶೆಟ್ಟಿ, ಜಗದೀಶ್ ಕುಮಾರ್, ಪ್ರಕಾಶ್ ಮಡಿವಾಳ ಕೋಶಾಧಿಕಾರಿ ರಾಜೇಶ್ ಪೂಜಾರಿ ಪದಾಧಿಕಾರಿಗಳಾದ ಪ್ರಸನ್ನ ಆಚಾರ್ಯ, ಪ್ರಮಿತ್ ಸುವರ್ಣ, ಸುಮಂತ್, ಜಿತೇಶ್, ಜೀವನ್, ರೋಹಿತ್, ಸತೀಶ್ ಮಡಿವಾಳ ಹಾಜರಿದ್ದರು.
ಮಂಡಲದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿ ನಿರೂಪಿಸಿದರು. ಚಂದ್ರಹಾಸ್ ಪೂಜಾರಿ ವಂದಿಸಿದರು.