ಉಡುಪಿ: ಶ್ರೀಮನ್ಮಧ್ವ ಸಿದ್ಧಾಂತ ಪ್ರಭೋಧಕ ಸಂಸ್ಕೃತ -ಸ್ನಾತಕ – ಸ್ನಾತಕೋತ್ತರ ಅಧ್ಯಯನ ಕೇಂದ್ರ,ಉಡುಪಿ ಇದರ ವತಿಯಿಂದ, ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಂಸ್ಕೃತೋತ್ಸವ ಸಮಾರಂಭ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಸಂಸ್ಕೃತ ಭಾಷೆಯ ಮಹತ್ಮುಂವದ ಕುರಿತು ಮಾತನಾಡಿದರು.
ಕೇಂದ್ರ ಮಂತ್ರಿಗಳಾದ ಮಾನ್ಸುಖ್ ಎಲ್.ಮಾಂಡವಿ ಅವರು ಮಾತನಾಡಿ, ಸಂಸ್ಕೃತವು ದೇವಭಾಷೆ. ಅದು ಎಲ್ಲ ಸಂಶೋಧನೆಗೂ ಮೂಲವಾಗಿದೆ, ಆದ್ದರಿಂದ ಈ ಸಭೆಯಲ್ಲಿ ಭಾಗವಹಿಸಿದ್ದು ಸಂತೋಷವಾಗಿದೆ ಎಂದರು.
ಅದಮಾರು ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅಭ್ಯಾಗತರಾಗಿ ವಿದ್ವಾನ್ ವಾಗೀಶ ಎಸ್.ಶಾಸ್ತ್ರಿ,ಡಾ.ಮಧುಸೂದನ ಅಡಿಗ,ವಿದ್ವಾನ್ ವೆದವ್ಯಾಸಾ ತಂತ್ರಿ ಹಾಗೂ ಎಸ್.ಎಂ.ಎಸ್.ಪಿ ಸಭಾದ ಕಾರ್ಯದರ್ಶಿ ಯು.ರತ್ನಕುಮಾರ್ ಉಪಸ್ಥಿತರಿದ್ದರು.
ಎಸ್.ಎಂ.ಎಸ್.ಪಿ.