ಸಾಣೂರು ಯುವಕ ಮಂಡಲ ವಾರ್ಷಿಕೋತ್ಸವ ಸಮಾರಂಭ: ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿದರೆ ಸಮಾಜದ ಪ್ರಗತಿ: ವಿಷ್ಣುಮೂರ್ತಿ

ಕಾರ್ಕಳ: ಯುವಕ ಸಂಘಗಳು ಸಾಮಾಜಿಕ ಚಿಂತನೆಯೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ಕೊಟ್ಟಾಗ ಸಮಾಜದ ಪ್ರಗತಿಗೆ ಕಾರಣವಾಗುತ್ತದೆ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಶ್ರೀ ವಿಷ್ಣುಮೂರ್ತಿ ಹೇಳಿದರು. ಅವರು ಸಾಣೂರು ಪಟೇಲ್ ದಿ.‌ ಮುದ್ದಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವಕ ಮಂಡಲ ಸಾಣೂರು ಇದರ 66ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.‌‌ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕರಾದ ಉಷರಾಣಿ ಶೆಟ್ಟಿ ಕಿನ್ನಿಗೋಳಿ ಮಾತಾನಾಡಿ, ಹಿರಿಯರು ಹಾಕಿದ ಸಂಪ್ರದಾಯವನ್ನು ಪಾಲಿಸುತೀರುವ ಮಂಡಲದ ಕಾರ್ಯ ಶ್ಲಾಘನೀಯವೆಂದರು.
ಮಂಡಲದ ಹಿರಿಯ ಸದಸ್ಯರಾದ ರಾಘ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈಶಾವಾಸ್ಯಂ ಟ್ರಸ್ಟ್‌ (ರಿ.) ಸಾಣೂರು ಇದರ ಆಡಳಿತ ನಿರ್ದೇಶಕರಾದ ವೇದಮೂರ್ತಿ ಶ್ರೀ ರಾಮ್ ಭಟ್, ಶಂಕರ್ ಶೆಟ್ಟಿ ಕೆಳಗಿನಬಾವ, ಪದ್ಮನಾಭ ಶೆಟ್ಟಿ ಮುದೆಲಾಡಿ ಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ   ಸುಧೀರ್ ಸಾಯಕ್ ಸಚ್ಚರಿಪೇಟೆ, ರಂಗಭೂಮಿ ಕಲಾವಿದರ ಚಂದ್ರಹಾಸ ಸಾಣೂರು ಇವರನ್ನು ಸನ್ಮಾನಿಸಲಾಯಿತು.
2019 ನೇ ಸಾಲಿನ ದಿ. ಶ್ರೀಧರ ಪಾಂಡಿ ಸಂಸ್ಮರಣಾ ಯಕ್ಷಶ್ರೀ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಆನಂದ ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಯಿತು.‌
ಸಾಣೂರು ಗ್ರಾಮದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಅಂತಿಮ ತರಗತಿಯ ವಿಧ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು.‌
ಮಂಡಲದ ಅಧ್ಯಕ್ಷರಾದ ಪ್ರಕಾಶ ಮಡಿವಾಳ ಸ್ವಾಗತಿಸಿ, ಪ್ರಸಾದ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿ, ಪ್ರಜ್ವಲ್ ಶೆಟ್ಟಿ ಸಂದೇಶ ವಾಚನ ವಾಚಿಸಿದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಪ್ರಕಾಶ್ ರಾವ್ ವಂದಿಸಿದರು.