ಕಾರ್ಕಳ: ಯುವಕ ಮಂಡಲ ಸಾಣೂರು, ಗ್ರಾಮ ಪಂಚಾಯತ್ ಸಾಣೂರು, ಡಾ|| ಟಿ.ಎಂ.ಎ.ಪೈ. ರೋಟರಿ ಆಸ್ಪತ್ರೆ, ಕಾರ್ಕಳ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಸಂಯುಕ್ತ ಆಶ್ರಯದಲ್ಲಿ ನ.24ರಂದು ಉಚಿತ ಹೃದಯ ರೋಗ ತಪಾಸಣೆ ಮತ್ತು ಕಣ್ಣಿನ ತಪಾಸಣಾ ಶಿಬಿರ ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಜರುಗಿತು.
ಶಿಬಿರವನ್ನು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಉದ್ಘಾಟಿಸಿ ಶುಭಹಾರೈಸಿದರು.
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ಸುರೇಂದ್ರ ನಾಯಕ್ ಪ್ರಸ್ತಾವನೆಗೈದರು ಲ. ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಡಾ.ಟಿ.ಎಂ.ಎ.ಪೈ. ರೋಟರಿ ಆಸ್ಪತ್ರೆ, ಕಾರ್ಕಳ ಇಲ್ಲಿನ ವೈದ್ಯರಾದ ಡಾ. ಲಿನ್ಯಾ, ಡಾ. ಪ್ರಕಾಶ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 128 ಮಂದಿ ಪ್ರಯೋಜನ ಪಡೆದುಕೊಂಡರು.
ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.