ಪಯಣ
♦ ಸಂಗೀತಾ ಸು ಗೋಪಾಲ್
ಸುದೀರ್ಘ ದಾರಿ.
ಕೊನೆಯಿಲ್ಲದ ಗುರಿಯಿಲ್ಲದ ಪಯಣ
ದಾರಿ ಸವೆದಂತೆ ಮನವು
ಏಕಾಂಗಿತನದ ಬೇಗುದಿಗೆ
ಚೀರುತ್ತಲೇ ಇದೆ ಅಂಗಿಂದ್ದಾಗೆ
ಹಾದಿಯ ಕಲ್ಲು-ಮುಳ್ಳುಗಳಿಗೆ
ಜರ್ಜರಿತಗೊಂಡಿವೆ ಪಾದಗಳು
ನೋವಿನ ಹಾಹಾಕಾರ ಎತ್ತಿದರೂ ಕಣ್ಣೊರೆಸುವ ಮಮತೆಯೇ ಕಾಣದು.
ಬಂಜರು ಇಳೆಗೆ ಪ್ರೀತಿಯ ಸೆಲೆ
ಕಾಣಲು ಅರಸುತ್ತಲೇ ಇರುವವು
ನಯನಗಳು ಕಾಣದು ಎಲ್ಲಿಯೂ
ಮನ ತಣಿಯುವ ಆಸರೆಯು.
ಅವರಿವರ ಬಿಸಿ ಚಾಟಿಯ ಏಟಿಗೆ
ನೆತ್ತರು ಸುರಿದರು ಮೌನವೇ
ಉತ್ತರವಾಗಿದೆ
ಕಣ್ಣೀರೇ ಒಡಲ
ದಾಹ ನೀಗುವ ಅಮೃತವೂ ಆಗಿದೆ.
ನಿಟ್ಟುಸಿರ ಬೇಗೆಯೊಂದಿಗೆ ಸಾಗುತ್ತಲೇ
ಇದೆ ಹೆಜ್ಜೆಗಳು ಸ್ಪರ್ಧೆಗಿಳಿದಂತೆ
ಎಂದು ಮುಗಿಯುವುದೊ ಈ ಪಯಣ. ಎಂದು ಕೊನೆಗೊಳ್ಳುವವೊ ಬಯಕೆಗಳ ಶಿಖರ.
ಹಾದಿ ಸವೆಯುತ್ತಲೇ ಇದೆ..
ನಡುವೆ ಮನವು ಮುಕ್ತಿಯ
ಅರಸುತ್ತದೆ ಇದೆ ಪದೇ ಪದೇ..
ದುಸ್ತರ ಬದುಕಿಗೊಂದು ಅಂತ್ಯವ ಬೀಳುತ್ತಿದೆ.