ಕಟಪಾಡಿ: ಶಾಸಕರ ಜನ ಸ್ಪಂದನ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಭಗವಾನ್ ಬುದ್ಧ, ಬಸ ವೇಶ್ವರ, ಅಂಬೇಡ್ಕರ್, ಡಾ. ಶಿವಕುಮಾರ ಸ್ವಾಮೀಜಿ ಜಯಂತಿ ಹಾಗೂ ಸಂಗಮ ಸಮಾವೇಶ ಸಮಾರಂಭದಲ್ಲಿ ‘ಸಂಗಮ ರತ್ನ’ ರಾಷ್ಟ್ರೀಯ ಪ್ರಶಸ್ತಿಯನ್ನು ಕಟಪಾಡಿಯ ಬಹುಮುಖ ಪ್ರತಿಭೆಯಾದ ಯುವ ಜಾದೂಗಾರ ಪ್ರಥಮ ಕಾಮತ್ ಪಡೆದಿರುತ್ತಾರೆ.
ಮೇ 22 ರ ಭಾನುವಾರ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಯಿತು.
ಡಾ. ಆರೂಢ ಭಾರತೀ ಸ್ವಾಮೀಜಿಯವರು ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಡಾ. ಸುಭಾಷ್ ಭರಣಿ, ಬಿ.ರ್ ಹೀರೆಮಟ, ಡಾ.ಹೆಚ್. ಸದಾಶಿವ, ಡಾ. ಚಿಕ್ಕಾಹೆಜ್ಜಾಜಿ ಮಹದೇವ್, ಯೋಗಾನಂದ ಗೌಡ, ಉಮಾನಾಥ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಕಟಪಾಡಿಯ ರಂಗ ನಟ ನಾಗೇಶ್ ಕಾಮತ್ ಮತ್ತು ಸುಜಾತ ಕಾಮತ್ ದಂಪತಿಯ ಪುತ್ರನಾದ ಪ್ರಥಮ್ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ಎಸೆಸೆಲ್ಸಿ ವಿದ್ಯಾರ್ಥಿ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಯಲ್ಲಿ 95% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಪಡೆದಿದ್ದಾನೆ.