udupixpress
Home Trending ಡ್ರಗ್ಸ್ ನಶೆಯಲ್ಲಿ ತೇಲುತ್ತಿದೆ ಸ್ಯಾಂಡಲ್ ವುಡ್?.

ಡ್ರಗ್ಸ್ ನಶೆಯಲ್ಲಿ ತೇಲುತ್ತಿದೆ ಸ್ಯಾಂಡಲ್ ವುಡ್?.

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ ಜಾಲವೊಂದನ್ನು ಎನ್ ಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಸ್ಯಾಂಡಲ್ ವುಡ್ ಸಿನಿಮಾ ನಟ ನಟಿಯರು ಇವರ ಖಾಯಂ ಗ್ರಾಹಕರು ಎಂಬ ಮಾಹಿತಿ ಸಂಚಲನ ಮೂಡಿಸಿದೆ.

ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ ಮೇಲೆ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ) ಅಧಿಕಾರಿಗಳು ಆಗಸ್ಟ್ 21ರಂದು ದಾಳಿ ಮಾಡಿದ್ದು, ‘ಡ್ರಗ್ಸ್‌’ ಜಾಲ ಕಿಂಗ್‌ಪಿನ್ ಆಗಿದ್ದ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ. ಅವರಿಂದ 145 ಡ್ರಗ್ಸ್‌ ಮಾತ್ರೆಗಳು ಹಾಗೂ ₹ 2.20 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

ಡಿ. ಅನಿಕಾ, ಮೊಹಮ್ಮದ್ ಅನೂಪ ಹಾಗೂ ರಾಜೇಶ್ ರವೀಂದ್ರನ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿ ಅನಿಕಾ, ಡ್ರಗ್ಸ್ ವ್ಯಸನಿಗಳಾಗಿರುವ ಸ್ಯಾಂಡಲ್‌ವುಡ್‌ನ ಕೆಲ ನಟರು ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಸಂಗತಿಯನ್ನು ಬಾಯ್ಬಿಟ್ಟಿದ್ದಾಳೆ.

ನಟರು ಹಾಗೂ ಸಂಗೀತ ನಿರ್ದೇಶಕರು ಮಾತ್ರವಲ್ಲದೇ ಶ್ರೀಮಂತರು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

 

error: Content is protected !!