ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಟಿಯರೇ ಏಜೆಂಟ್: ಹೊಸ ಬಾಂಬ್ ಸಿಡಿಸಿದ ಇಂದ್ರಜಿತ್ ಲಂಕೇಶ್

ಬೆಂಗಳೂರು: ಡ್ರಗ್ಸ್ ಜಾಲದೊಂದಿಗೆ ಚಿತ್ರರಂಗದ 25ರಿಂದ 30 ಕಲಾವಿದರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಪೊಲೀಸರು ವಿಚಾರಣೆಗೆ ಕರೆದರೆ ಎಲ್ಲವನ್ನೂ ಬಹಿರಂಗಪಡಿಸಿವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ‌ ಸ್ಯಾಂಡಲ್ ವುಡ್ ನಟಿಯರು ಸೇರಿಕೊಂಡಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದ ನಟಿಯರೂ ಇದ್ದಾರೆ. ಇವರಲ್ಲಿ 18 ಜನ ಏಜೆಂಟ್ ಗಳೇ ಇರುವ ಬಗ್ಗೆ ಮಾಹಿತಿ ಇದೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಲಾಕ್ ಡೌನ್ ವೇಳೆ 4 ಕೋಟಿ ವಹಿವಾಟು:
ಕೋವಿಡ್ ಲಾಕ್ ಡೌನ್ ವೇಳೆ 3.5ರಿಂದ 4 ಕೋಟಿ ಡ್ರಗ್ಸ್ ವಹಿವಾಟು ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸರು ಮಾಹಿತಿ ಬಹಿರಂಗಪಡಿಸಬೇಕಷ್ಟೇ. ಅವರಿಗೆ ಎಲ್ಲವೂ ಗೊತ್ತಿದೆ ಎಂದರು.

ಯಾರೆಲ್ಲ ಡ್ರಗ್ಸ್ ಜಾಲದಲ್ಲಿದ್ದಾರೆ, ಎಷ್ಟು ಹಣ ಪಾವತಿಯಾಗಿದೆ. ತನಿಖೆ ನಡೆಸಿದ್ದರೆ ಎಲ್ಲ ಮಾಹಿತಿ ಬಹಿರಂಗ ಆಗುತ್ತಿತ್ತು. ಪೊಲೀಸರು ಮನಸ್ಸು ಮಾಡಿದರೆ ಈ ಕ್ಷಣವೇ ಅವರನ್ನು ಬಂಧಿಸಬಹುದು. ಪೊಲೀಸರ ಬಳಿ ಎಲ್ಲ ಮಾಹಿತಿ, ದಾಖಲೆಗಳಿವೆ ಎಂದು ತಿಳಿಸಿದರು.

ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದೆಡೆ ವೇಶ್ಯಾವಾಟಿಕೆ ಯಾವ ರೀತಿ ನಡೆಯುತ್ತಿದೆ. ಇದರಿಂದ ಯಾರು ಯಾರಿಗೆ ಅವಕಾಶ ಸಿಕ್ಕಿದೆ. ಹಲವಾರು ವಿಚಾರಗಳ ಬಗ್ಗೆ ತನಿಖೆಯಾಗಬೇಕು. ಪೊಲೀಸರ ಸಹಕಾರದಿಂದ ಎಲ್ಲ ಮಾಹಿತಿ ಬಹಿರಂಗ ಪಡಿಸಬಹುದು. ಹಾನಿ ಟ್ರ್ಯಾಪ್, ಡ್ರಗ್ಸ್ ಮಾಫಿಯಾದ ಬಗ್ಗೆ ಅವರಲ್ಲಿ ಸ್ಪಷ್ಟ ಚಿತ್ರಣವಿದೆ. ಆದರೆ ರಾಜಕಾರಣಿಗಳು ಪೊಲೀಸರ ಕೈ ಕಟ್ಟಿ ಹಾಕಿದ್ದಾರೆ ಎಂದು ಆರೋಪಿಸಿದರು.

ಕೆಲ ನಟಿಯರು ಸ್ಮೆಲ್ ಹೊಡಿತಾರೆ:
ನಟಿಯರು ರಾತ್ರಿ ತೆಗೆದುಕೊಂಡಿದ್ದ ಡ್ರಗ್ಸ್ ಸ್ಮೆಲ್ ಬೆಳಿಗ್ಗೆಯೂ ಹೊಡೆಯುತ್ತಿತ್ತು. ಸ್ಮೆಲ್ ನೋಡಿಯೇ ಅವರನ್ನು ಕಾರ್ಯಕ್ರಮದಿಂದ ಹೊರಕಳುಹಿಸಿದ ಘಟನೆಯೂ ನಡೆದಿದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಇಂತಹ ಮುಜುಗರ ಕೂಡ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.