ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಎಎಸ್‌ಪಿ ದಾಳಿ:ಆರೋಪಿಗಳು ಪರಾರಿ

ಕುಂದಾಪುರ: ಇಲ್ಲಿನ ಹಟ್ಟಿಕುದ್ರು ಅಕ್ರಮ ಮರಳು ಅಡ್ಡೆಗೆ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ನೇತೃತ್ವದ ಪೊಲೀಸರ ತಂಡ ಸೋಮವಾರ ಸಂಜೆ ದಾಳಿ ನಡೆಸಿದೆ.

ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಹಿಟಾಚಿ, ಟಿಪ್ಪರ್ ಹಾಗೂ ಸುಮಾರು ಐವತ್ತು ಯೂನಿಟ್‌ಗೂ ಮಿಕ್ಕಿ ಮರಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆಯಲ್ಲಿ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಗ್ಗೆ ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.