ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಸಾಮೂಹಿಕ ಚೂಡಿ ಪೂಜೆ

ಉಡುಪಿ: ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಮಹಿಳಾ ಮಂಡಳಿ ವತಿಯಿಂದ ಶ್ರಾವಣ ಮಾಸದ ಸಾಮೂಹಿಕ ಚೂಡಿ ಪೂಜೆ ಆದಿತ್ಯವಾರ ನಡೆಯಿತು.

ಮಂಡಳಿಯ ಅಧ್ಯಕ್ಷೆ ಸುಧಾ ಆರ್ ಶೆಣೈ ಮಾರ್ಗದರ್ಶನದಲ್ಲಿ ಪ್ರಕೃತಿ ಯಲ್ಲಿ ದೊರೆಯುವ ವಿವಿಧ ಜಾತಿಯ ಹೂಗಳಿಂದ ತಯಾರಿಸಿದ ಚೂಡಿ ಯನ್ನು ತುಳಸಿ ಸನ್ನಿಧಾನದಲ್ಲಿ ಪೊಜೆಸಿ ದೇವರಿಗೆ ಅರ್ಪಣೆ ಮಾಡಲಾಯಿತು. ಹೊಸ್ತಿಲ ಪೂಜೆ ನೆಡೆಸಿ , ಮುತ್ತೈದೆಯರು ಚೂಡಿಯನ್ನು ಪರಸ್ಫರ ವಿನಿಮಯ ಮಾಡಿಕೊಂಡರು.