ನವದೆಹಲಿ : ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ 34 5 ಜಿ ಸ್ಮಾರ್ಟ್‌ಫೋನ್ ಅನ್ನು ಶುಕ್ರವಾರ ದೇಶದಲ್ಲಿ ಬಿಡುಗಡೆ ಮಾಡಿದೆ. ಇದು 50MP (OIS) ‘ನೋ ಶೇಕ್’ ಕ್ಯಾಮೆರಾ, 6000mAh ಬ್ಯಾಟರಿ ಮತ್ತು ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ 34 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಇಂದು ಪರಿಚಯಿಸಿದೆ. ಪರಿಚಯಾತ್ಮಕ ಕೊಡುಗೆಯಾಗಿ, Galaxy M34 5G 6GB+128GB ಮಾದರಿಗೆ ರೂ 16,999 ಮತ್ತು ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ 8GB+ 128GB ಮಾದರಿಗೆ ರೂ 18,999 ಬೆಲೆ ನಿಗದಿಪಡಿಸಲಾಗಿದೆ.
ಹೊಸ ಫೋನ್ ಏನೇನು ವಿಶೇಷತೆ ಹೊಂದಿದೆ; ಸಾಧನವು 6.5 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ ಪ್ಲೇ ಜೊತೆಗೆ 1000 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಇದಲ್ಲದೆ, ಇದು 5nm-ಆಧಾರಿತ Exynos 1280 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. “Galaxy M ಸರಣಿಯು ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯ ಸಾರಾಂಶವಾಗಿದೆ. ಅಮೆಜಾನ್‌ನ ಪ್ಯಾನ್ ಇಂಡಿಯಾ ವ್ಯಾಪ್ತಿಯೊಂದಿಗೆ, ನಮ್ಮ ತ್ವರಿತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿತರಣೆಯ ಭರವಸೆಯೊಂದಿಗೆ ನೀವು ಈ ಅನನ್ಯ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಇಷ್ಟವಾದುದೆಲ್ಲವನ್ನು ಪಡೆಯಬಹುದು.” ಎಂದು ಅಮೆಜಾನ್ ಇಂಡಿಯಾದ ವೈರ್‌ಲೆಸ್ ಮತ್ತು ಹೋಮ್ ಎಂಟರ್‌ಟೈನ್‌ಮೆಂಟ್ ನಿರ್ದೇಶಕ ರಂಜಿತ್ ಬಾಬು ಹೇಳಿದರು.
ಹೊಸ ಸ್ಮಾರ್ಟ್‌ಫೋನ್ ಶುಕ್ರವಾರದಿಂದ ಅಮೆಜಾನ್‌ನಲ್ಲಿ ಮಾರಾಟವಾಗಲಿದೆ. ಇದು ಮಿಡ್‌ನೈಟ್ ಬ್ಲೂ, ಪ್ರಿಸ್ಮ್ ಸಿಲ್ವರ್ ಮತ್ತು ವಾಟರ್‌ಫಾಲ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಸಿಗಲಿದೆ ಕಂಪನಿ ತಿಳಿಸಿದೆ. ಪ್ರಭಾವಶಾಲಿ 50 MP ನೋ ಶೇಕ್ ಕ್ಯಾಮರಾ, ಪ್ರಮುಖ ವೈಶಿಷ್ಟ್ಯಗಳಾದ ನೈಟೋಗ್ರಫಿ, ಬೃಹತ್ 6000mAh ಬ್ಯಾಟರಿ, ಇಮ್ಮರ್ಸಿವ್ 120Hz ಸೂಪರ್ AMOLED ಡಿಸ್ ಪ್ಲೇ, 4 ಜನರೇಶನ್ಗಳವರೆಗೆ OS ಅಪ್ಡೇಟ್ಗಳು ಮತ್ತು 5 ವರ್ಷಗಳ ಭದ್ರತಾ ಅಪ್ಡೇಟ್ಗಳು ಈ ಸ್ಮಾರ್ಟ್ನಲ್ಲಿ ಸಿಗಲಿವೆ.” ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವ್ಯವಹಾರದ ಹಿರಿಯ ನಿರ್ದೇಶಕ ಆದಿತ್ಯ ಬಬ್ಬರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
“Galaxy M34 5G ತನ್ನ ಮಾನ್ ಸ್ಟರ್ ಶಾಟ್ 2.0 ವೈಶಿಷ್ಟ್ಯದೊಂದಿಗೆ ಛಾಯಾಗ್ರಹಣ ಅನುಭವವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ. ಇದು ಗ್ರಾಹಕರಿಗೆ ಒಂದೇ ಶಾಟ್‌ನಲ್ಲಿ 4 ವೀಡಿಯೊಗಳು ಮತ್ತು 4 ಫೋಟೋಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ” ಎಂದು ಕಂಪನಿ ಹೇಳಿದೆ. ಇದು ಫನ್ ಮೋಡ್ ಅನ್ನು ಸಹ ಹೊಂದಿದೆ. 16 ವಿಭಿನ್ನ ಅಂತರ್ಗತ ಲೆನ್ಸ್ ಎಫೆಕ್ಟ್ಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾದ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.
ಇದರಲ್ಲಿದೆ ನೋ ಶೇಕ್ ಕ್ಯಾಮೆರಾ: ಹೊಸ ಸ್ಮಾರ್ಟ್‌ಫೋನ್ 50MP (OIS) ನೋ ಶೇಕ್ ಕ್ಯಾಮೆರಾವನ್ನು ಹೊಂದಿದ್ದು, ಹೆಚ್ಚಿನ ರೆಸಲ್ಯೂಶನ್ ಮತ್ತು ಶೇಕ್-ಫ್ರೀ ಫೋಟೋಗಳು ಮತ್ತು ವೀಡಿಯೊಗಳನ್ನು ಶೂಟ್ ಮಾಡಲು, ಕೈ ನಡುಕ ಅಥವಾ ಆಕಸ್ಮಿಕ ಶೇಕ್‌ಗಳಿಂದ ಉಂಟಾಗುವ ಮಸುಕಾದ ಚಿತ್ರಗಳು ಸೆರೆಹಿಡಿಯದಂತೆ ಮಾಡುತ್ತದೆ. ಇದು 13MP ಹೈ-ರೆಸಲ್ಯೂಶನ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.