ಬೆಂಗಳೂರು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಬಿಡುಗಡೆಯಾಗಿದ್ದ A21s ಸ್ಮಾರ್ಟ್‌ಫೋನ್ ದರದಲ್ಲಿ ₹2,500 ಇಳಿಕೆಯಾಗಿದೆ.
ಕಳೆದ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s, 4 GB + 64 GB ಮಾದರಿಗೆ ಪರಿಷ್ಕೃತ ದರ ₹13,999 ಹಾಗೂ 6 GB + 64 GB ಆವೃತ್ತಿಗೆ ₹16,490 ದರವಿದೆ ಎಂದು ಮುಂಬೈ ಮೂಲದ ರಿಟೇಲರ್ ಆಗಿರುವ ಮಹೇಶ್ ಟೆಲಿಕಾಂ ತಿಳಿಸಿದ್ದಾರೆ.
ಕಪ್ಪು, ಬಿಳಿ ಮತ್ತು ನೀಲಿ ಎಂಬ ಮೂರು ಬಣ್ಣಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ದೊರೆಯಲಿದೆ.