ಶಿವಪಾಡಿ ಅತಿರುದ್ರ ಮಹಾಯಾಗದ ಪ್ರಯುಕ್ತ ಸಮರ್ಪಣಾ ದಿವಸ್: ಶಾಸಕ ರಘುಪತಿ ಭಟ್ ಭಾಗಿ

ಮಣಿಪಾಲ: ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಸರಳೇಬೆಟ್ಟು ಉಡುಪಿ ಇಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 5 ರವರೆಗೆ “ಅತಿರುದ್ರ ಮಹಾಯಾಗ” ನಡೆಯಲಿದ್ದು, ಇದರ ಪ್ರಯುಕ್ತ ಭಾನುವಾರದಂದು ನಡೆದ ಸಮರ್ಪಣಾ ದಿವಸ್ ಸಭಾ ಕಾರ್ಯಕ್ರಮದಲ್ಲಿ ಶಾಸಕ, ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಭಾಗವಹಿಸಿದರು.

ಈ ಸಂದರ್ಭ ಅತಿರುದ್ರ ಮಹಾಯಾಗ ಪಾವನ ಕಾರ್ಯಕ್ಕೆ ಉಪಯೋಗಿಸುವ ತುಪ್ಪ, ಎಳ್ಳು, ಭತ್ತ, ಎಳ್ಳೆಣ್ಣೆ, ಗೇರುಬೀಜ, ಅಕ್ಕಿ ಮತ್ತು ಒಣಫಲ ವಸ್ತುಗಳ ಸಮರ್ಪಣೆ ನಡೆಯಿತು.