ಸಾಲಿಗ್ರಾಮ ಶ್ರೀ ಗುರುನರಸಿಂಹ ಮತ್ತು ಆಂಜನೇಯ ದೇವಸ್ಥಾನದಲ್ಲಿ ಮಧ್ಯವರ್ತಿಗಳನ್ನು ನೇಮಿಸಿಲ್ಲ: ಡಾ. ಕೆ.ಎಸ್. ಕಾರಂತ

ದೇಶದ ಹೆಸರಾಂತ ದೇವಸ್ಥಾನಗಳ ಸೇವೆಗಳನ್ನು ಅಂತರ್ಜಾಲದ ಮೂಲಕ ಒದಗಿಸುವ ಬಗ್ಗೆ ಅನೇಕ ಕೊಂಡಿಗಳು ಅಸ್ತಿತ್ವದಲ್ಲಿವೆ. ಅಂತಹ ಕೊಂಡಿಗಳು ತಮ್ಮ ಜಾಲದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರುನರಸಿಂಹ ಮತ್ತು ಆಂಜನೇಯ ದೇವಳಗಳನ್ನೂ ಹೆಸರಿಸಿ ಕಾರ್ಯಾಚರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ನಮ್ಮ ಆಡಳಿತಕ್ಕೆ ಒಳಪಟ್ಟಿರುವ ಉಭಯ ದೇವಳಗಳಿಗೂ ಇಂತಹ ಜಾಲತಾಣಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಮಾತ್ರವಲ್ಲದೆ, ನಮ್ಮ ಆಡಳಿತ ಮಂಡಳಿಯು ಆನ್ ಲೈನ್ ಸೇವೆಗೆಂದು ಯಾವುದೇ ಮಧ್ಯವರ್ತಿ ವ್ಯಕ್ತಿಗಳನ್ನಾಗಲಿ, ಸಂಸ್ಥೆಗಳನ್ನಾಗಲಿ ನೇಮಿಸಿರುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.

ಸಾರ್ವಜನಿಕ ಆಸ್ತಿಕ ಬಂಧುಗಳು ಯಾವತ್ತೂ ಸೇವೆಗಳಿಗೆ ನೇರವಾಗಿ ದೇವಳದ ಅಧಿಕೃತ ಅಂತರ್ಜಾಲ ತಾಣವನ್ನು ಆಶ್ರಯಿಸುವುದೂ ಸೇರಿದಂತೆ ನೇರವಾಗಿ ದೇವಳದ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಳದ ಸಂಪರ್ಕಕ್ಕೆ ಲಭ್ಯವಿರುವ ಅಧಿಕೃತ ಮಾಹಿತಿ ಕೆಳಕಂಡಂತೆ ಇದೆ.
ದೂರವಾಣಿ: 0820-2987 444, 94495 45714, 94834 88684.

ಶ್ರಿಆಂಜನೇಯ ದೇವಸ್ಥಾನ: 87623 05714, ವೆಬ್ಸೈಟ್: srigurunarasimhatemple.com
ಇಮೈಲ್ : [email protected]
(ಡಾ. ಕೆ.ಎಸ್. ಕಾರಂತ), ಅಧ್ಯಕ್ಷರು, ಆಡಳಿತ ಮಂಡಳಿ, ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ.