ಶಕಲಕ ಬೂಂ ಬೂಂ ಹಾರರ್ ಕಾಮಿಡಿ ಥ್ರಿಲ್ಲರ್ ಚಲನಚಿತ್ರದ ನಾಯಕ, ನಾಯಕಿಯ ಪೋಸ್ಟರ್ ಬಿಡುಗಡೆ

ಮಂಗಳೂರು: ಡಿಸೆಂಬರ್ 16 ರಂದು ಬಿಡುಗಡೆಗೊಳ್ಳಲಿರುವ ಈ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಶ್ರೀ ಮಂಗಳಾದೇವಿ ದೇವಸ್ಥಾನ ಮಂಗಳೂರು ಓ ಸಿ ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ತುಳು ಮತ್ತು ಕನ್ನಡ ನಟ ವಿನೀತ್ ಕುಮಾರ್ ಮತ್ತು ಮಾಜಿ ಶಾಸಕ ರಮನಾಥ್ ರೈ ಅವರು ಬಿಡುಗಡೆಗೊಳಿ ಶುಭ ಹಾರೈಸಿದರು.
ಯು.ಎನ್ ಸಿನೆಮಾಸ್ ಬ್ಯಾನರ್ ನಡಿ ಮೂಡಿಬರುವ ಈ ಚಲನಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶನ ಮಾಡಿದ್ದಾರೆ. ನಿತ್ಯಾನಂದ ನರಸಿಂಗೆ, ಉಮೇಶ್ ಪ್ರಭು ಮಣಿಬೆಟ್ಟು ನಿರ್ಮಾಪಕರಾಗಿದ್ದಾರೆ ಹಾಗೂ ಡಾಲ್ವಿನ್ ಕೊಳಲಗಿರಿ ಚಿತ್ರದ ಸಂಗೀತ ನಿರ್ದೇಶಕರಾಗಿದ್ದರೆ.

ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದೆ. ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್ ಜೊತೆಯಾಗುವ ಸನ್ನಿವೇಶಗಳು ನಕ್ಕು ನಗಿಸಲಿವೆ. ಚಿತ್ರದಲ್ಲಿ ರೂಪಶ್ರೀ ವರ್ಕಾಡಿ, ಮನೋಹರ್ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಗಾಡ್ವಿನ್ ಸ್ಪಾರ್ಕಲ್, ಲಕ್ಷಾ ಶೆಟ್ಟಿ, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಜ್, ಶಿವಾನಂದ, ಯಜ್ಞೇಶ್ ಶೆಟ್ಟಿ ಅಭಿನಯಿಸಿದ್ದಾರೆ.