ಉಡುಪಿ: ಸಾಹಿತ್ಯ ಕ್ಷೇತ್ರ ಮತ್ತು ವಿಶ್ವಹಿಂದೂ ಪರಿಷತ್ ನಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ
ನಮ್ಮ ಅತ್ಯಂತ ಆಪ್ತರೂ, ಆತ್ಮೀಯರೂ ಆದ ಏರ್ಯ ಲಕ್ಮೀನಾರಾಯಣ ಆಳ್ವರ ನಿಧನದ
ಸುದ್ದಿಯನ್ನು ತಿಳಿದು ನಮಗೆ ಅತ್ಯಂತ ಸಂತಾಪವಾಗಿದೆ.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲರ ಗೌರವ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ನ್ಯಾಯ, ಧರ್ಮಗಳಿಗೆ ಅನ್ಯಾಯವಾದರೆ ವಿರೋಧವಾದ ಘಟನೆಗಳಾದರೆ ನಿರ್ದಾಕ್ಷಿಣ್ಯವಾಗಿ ಅದನ್ನು ಪ್ರತಿಭಟಿಸುವ ಹೋರಾಟಗಾರರೂ ಆಗಿದ್ದರು. ನನಗಂತೂ ಉತ್ತಮ ಸಲಹೆಗಾರರೂ ಆಗಿದ್ದರು. ಅವರ ಆತ್ಮಕ್ಕೆ ಭಗವಂತನ ಅನುಗ್ರಹ ನಿರಂತರವಾಗಿ ಇರಲೆಂದು ನಾನು ಪ್ರಾರ್ಥಿಸುತ್ತೇನೆ.
ಅದರಂತೆ ನಮ್ಮ ಆತ್ಮೀಯರೂ ಅನೇಕ ತುಳು ಕೃತಿ ಗಳ ಲೇಖಕರು ಆದ ದೇವೇಂದ್ರ ಪೆಜತ್ತಾಯರ ಸೇವೆಯನ್ನೂ ಮತ್ತು ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ನಡೆಸಿದ ನಮ್ಮ ಅಭಿಮಾನ ಪಾತ್ರರಾದ ಕೆ. ಎಮ್ ಉಡುಪರ ಸೇವೆಯನ್ನು ಸ್ಮರಿಸುತ್ತಾ ಇವರೀರ್ವರಿಗೂ ಭಗವಂತನ ಅನುಗ್ರಹವನ್ನು ಪ್ರಾರ್ಥಿಸುತ್ತೇನೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.