ಸಾಹೇಬರಕಟ್ಟೆ ಜೈ ಗಣೇಶ್ ಸೌಹಾರ್ದ ಸಹಕಾರಿ ಸಂಘ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಕೋಟ: ಸಾಹೇಬರಕಟ್ಟೆ ಜೈ ಗಣೇಶ್ ಸೌಹಾರ್ದ ಸಂಸ್ಥೆಯ ನೂತನ ಕಟ್ಟಡ ಸೌಹಾರ್ದ ಸಿರಿ ಇತ್ತೀಚೆಗೆ ಉದ್ಘಾಟನೆಗೊಂಡಿದ್ದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಜು.16ರಂದು ಇಲ್ಲಿಗೆ ಭೇಟಿ ನೀಡಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಅಶೋಕ್‌ ಪ್ರಭು ಸಾಹೇಬರಕಟ್ಟೆ ಅವರು ಸಂಸದರನ್ನು ಸಮ್ಮಾನಿಸಿದರು. ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಶಿರಿಯಾರ ವಿ.ಎಸ್.ಎಸ್‌. ಅಧ್ಯಕ್ಷ ಪ್ರದೀಪ್ ಬಲ್ಲಾಳ್, ಜೈ ಗಣೇಶ್ ಸಂಘದ ಸಾಪಕಾಧ್ಯಕ್ಷ
ಶಿರಿಯಾರ ಪ್ರಭಾಕರ ನಾಯಕ್, ಸಂಘದ ಉಪಾಧ್ಯಕ್ಷ ಎಚ್‌. ನಾರಾಯಣ ಶೆಣೈ ಗಾವಳಿ, ನಿರ್ದೇಶಕರಾದ ರಾಘವೇಂದ ಹೆಗ್ಡೆ ವೆಂಕಟೇಶ್ ಪೈ ಸಾಸ್ತಾನ, ಪ್ರಸಾದ್ ಆರ್. ಭಟ್, ಜಗದೀಶ್ ಹೆಗ್ಡೆ ರಾಘವೇಂದ್ರ ಪ್ರಭು, ಎಂ.ರವೀಂದ್ರನಾಥ ಕಿಣಿ,ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಶ್ಯಾನುಭಾಗ್, ಮಧುವನ ಮಾಧವ ಹೆಗ್ಡೆ, ಜಂಬೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಬಲ್ಲಾಳ್ ಹಾಗೂ ಜಿ.ಎಸ್‌.ಬಿ. ಸಮಾಜದ ಪ್ರಮುಖರು, ಸ್ಥಳೀಯರು ಇದ್ದರು.