ಉಡುಪಿ: ಟೀಮ್ ಸಹರಾ ವತಿಯಿಂದ ಸಹಾರಾ ವಿಜಯ ದಶಮಿ – 2021 ಕಾರ್ಯಕ್ರಮವನ್ನು (ದತ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ) ಇದೇ ಅ. 15ರಂದು ಅಂಬಲಪಾಡಿಯ ಕುಂಜಗುಡ್ಡೆ ವಾಲಿಬಾಲ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಗಳ ವಿವರ:
ಸಂಜೆ 6ಕ್ಕೆ ಉದ್ಘಾಟನೆ, 6:15ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7ಕ್ಕೆ ಸನ್ಮಾನ ಮತ್ತು ದತ್ತಿ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ವಿಜಯಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ‘ಶಿವದೂತೆ ಗುಳಿಗೆ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಟೀಮ್ ಸಹರಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.