ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಕಚೇರಿಯಲ್ಲಿ ಖಾಲಿ ಇರುವ ಮಕ್ಕಳ ರಕ್ಷಣಾಧಿಕಾರಿ ( ಅಸಾಂಸ್ಥಿಕ ) ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ ಮತ್ತು ಅನುಭವ: ಎಮ್.ಎಸ್.ಡಬ್ಲ್ಯೂ/ ಸೋಶಿಯೋಲಾಜಿ/ ಮನಃಶಾಸ್ತ್ರ/ ಸಮುದಾಯ ಅಭಿವೃದ್ದಿ, ಮಹಿಳಾ ಅಧ್ಯಯನ, ಗೃಹ ವಿಜ್ಞಾನ ಮತ್ತು ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕುರಿತು ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವಲ್ಲಿ ಹಾಗೂ ಬರೆಯುವಲ್ಲಿ ಉತ್ತಮ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಅವಶ್ಯವಾಗಿರುತ್ತದೆ. 25 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ 13 ರಿಂದ ಕಚೇರಿ ವೇಳೆಯಲ್ಲಿ ಅರ್ಜಿ ಪಡೆಯಬಹುದಾಗಿದೆ.
ಅಭ್ಯರ್ಥಿಗಳು ಅರ್ಜಿಯೊಂದಿಗೆ ಬಯೋಡಾಟ, ಎಲ್ಲಾ ಅಂಕಪಟ್ಟಿಯ ಪ್ರತಿ, ಅನುಭವ ಪ್ರಮಾಣ ಪತ್ರ ಹಾಗೂ ಇತರೆ ಪ್ರಮಾಣ ಪತ್ರದೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ಮಣಿಪಾಲ ಇವರಿಗೆ ಜೂನ್ 27 ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಮಖ್ಯೆ; 0820-2574964 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.